ಅಂತಾರಾಷ್ಟ್ರೀಯ
ನಿಷೇಧಿತ ಚಿತ್ರ ವೀಕ್ಷಿಸಿದ್ದ ಬಾಲಕನಿಗೆ 14 ವರ್ಷಗಳ ಕಠಿಣ ಶಿಕ್ಷೆ

ಲಂಡನ್: ಉತ್ತರ ಕೊರಿಯಾದಲ್ಲಿ ಚಿತ್ರ ವಿಚಿತ್ರ ಕಾನೂನು ಜಾರಿಯಲ್ಲಿ ಇದೆ. ಇದೀಗ ನಿಷೇಧಿತ ಚಿತ್ರ ವೀಕ್ಷಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನೊಬ್ಬನಿಗೆ 14 ವರ್ಷಗಳ ಕಠಿಣ ಶಿಕ್ಷೆ ವಿಧಿಸಲಾಗಿದೆ.
14ರ ಹರೆಯದ ಬಾಲಕ ದಕ್ಷಿಣ ಕೊರಿಯಾದ ಚಿತ್ರ ವೀಕ್ಷಣೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಸರ್ವಾಧಿಕಾರಿ ಕಿಮ್ ಜಾಂಗ್ ಆಡಳಿತ ಈ ಶಿಕ್ಷೆ ಪ್ರಕಟಿಸಿದೆ.
ದಕ್ಷಿಣ ಕೊರಿಯಾದ ದಿ ಅಂಕಲ್ ಎಂಬ ಹೆಸರಿನ ಸಿನೆಮಾವನ್ನು ಬಾಲಕ ವೀಕ್ಷಣೆ ಮಾಡಿದ್ದ ಎಂದು ಆರೋಪಿಸಲಾಗಿತ್ತು. ನವೆಂಬರ್ ಏಳರಂದು ಬಾಲಕನನ್ನು ಬಂಧಿಸಲಾಗಿತ್ತು. ಸಿನೆಮಾ ವೀಕ್ಷಣೆ ಮಾಡಿದ ಐದು ನಿಮಿಷದಲ್ಲಿ ಭಾಲಕನನ್ನು ಶಾಲೆಯಿಂದ ಬಂಧಿಸಲಾಗಿತ್ತು. ಬಾಲಕನಿಗೆ ಕಠಿಣ ಶಿಕ್ಷೆ ನೀಡಿರುವುದಕ್ಕೆ ಅಂತಾರಾಷ್ಟ್ರೀಯ ಸಮುದಾಯ ಕಳವಳ ವ್ಯಕ್ತಪಡಿಸಿದೆ