ಕರಾವಳಿ

ಸಹೋದರಿ ನಿಖಿತಾ ಕುಲಾಲ್ ನಿರ್ಲಕ್ಷ್ಯದ ಸಾವಿಗೆ ನ್ಯಾಯ ಒದಗಿಸಲು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಆಗ್ರಹ

ಹದಿಹರೆಯದ ಪ್ರತಿಭಾನ್ವಿತ ವಿದ್ಯಾರ್ಥಿಯಾದ ನಿಖಿತಾ ಅನಾರೋಗ್ಯಕ್ಕೆ ಸಂಬಂಧಿಸಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು,ವೈದ್ಯಕೀಯ ಲೋಪದಿಂದ ಆಕೆ ಮೃತಪಟ್ಟಿರುವುದಾಗಿ ಮನೆಯವರು ತಿಳಿಸಿದ್ದಾರೆ.
ಇದೊಂದು ಆಘಾತಕಾರಿ ಸಂಗತಿಯಾಗಿದ್ದು ಯಾರಿಗೂ ಇಂತಹ ಪರಿಸ್ಥಿತಿ ಬರಬಾರದು ಎಂಬುದು ನಮ್ಮ ಕಳಕಳಿ.ಸಹೋದರಿ ನಿಖಿತಾ ಆತ್ಮಕ್ಕೆ ಶ್ರದ್ಧಾಂಜಲಿ ಪ್ರಾರ್ಥಿಸುತ್ತಾ,ಈ ಕುರಿತು ಸಂತಾಪ ಸೂಚಿಸುತ್ತೇವೆ.
ಒಬ್ಬಳೆ ಮಗಳನ್ನು ಆಸ್ಪತ್ರೆಯ ನಿರ್ಲಕ್ಷ್ಯದಿಂದ ಕಳೆದುಕೊಂಡು ದುಃಖದಲ್ಲಿರುವ ಮನೆಯವರಿಗೆ ಪರಿಹಾರ ಮತ್ತು ನ್ಯಾಯದ ಕುರಿತಾದ ಎಲ್ಲಾ ಪ್ರಯತ್ನಗಳಿಗೆ ನಮ್ಮ ಬೆಂಬಲ ಮತ್ತು ಸಹಕಾರವಿದೆ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷರಾದ ಪ್ರವೀಣ್ ಎಂ ಪೂಜಾರಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!