ಕರಾವಳಿ

ಉಡುಪಿ: ಗುಪ್ತಾಂಗ ತೋರಿಸುತ್ತಿದ್ದ ಖಾಸಗಿ ಬಸ್’ನ‌ ನಿರ್ವಾಹಕನಿಗೆ ಬಿತ್ತು ಬಿಸಿಬಿಸಿ ಕಜ್ಜಾಯ

ಉಡುಪಿ: ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರಿಗೆ ಪ್ರತಿನಿತ್ಯ ಗುಪ್ತಾಂಗ ತೋರಿಸುತ್ತಿದ್ದ ಖಾಸಗಿ ಬಸ್ ನ‌ ನಿರ್ವಾಹಕನೊರ್ವನಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ

ಹೆಬ್ರಿಯ ಹೆಸರಾಂತ ಖಾಸಗಿ ಬಸ್ ನ‌ ಕಂಡಕ್ಟರ್ ಉಪೇಂದ್ರ ಎನ್ನುವಾತ ಸಂತೆಕಟ್ಟೆಯ ನರ್ಸಿಂಗ್ ಕಾಲೇಜ್ ಬಳಿ ತನ್ನ ಸ್ಕೂಟಿಯಲ್ಲಿ ಬಂದು ಅಲ್ಲಿನ ವಿದ್ಯಾರ್ಥಿನಿಯರಿಗೆ ಪ್ಯಾಂಟ್ ಜಿಪ್ ಜಾರಿಸಿ ಕಳೆದ ಕೆಲವು ದಿನಗಳಿಂದ ಗುಪ್ತಾಂಗ ತೋರಿಸುತ್ತಿದ್ದ. ಮಾತ್ರವಲ್ಲದೆ ಕೈಸನ್ನೆ, ಕಣ್ಣ್ ಸನ್ನೆ ಮಾಡುತ್ತ ಯುವತಿಯರ ಜೊತೆ ಅಶ್ಲೀಲವಾಗಿ ವರ್ತಿಸುತ್ತಿದ್ದ ಎಂದು ದೂರಲಾಗಿತ್ತು.

ಇಂದು ಆತನ ಗ್ರಹಚಾರ ಕೆಟ್ಟಿತ್ತೋ ಏನೋ, ಕಾಲೇಜ್ ನ ಮುಖ್ಯಸ್ಥರು, ವಿದ್ಯಾರ್ಥಿನಿಯರು ಇರುವಾಗಲೇ ತನ್ನ ವರ್ತನೆ ತೋರಿಸುತ್ತಿದ್ದಂತೆ ಕಾಲೇಜ್ ನ ಸಿಬ್ಬಂದಿಗಳು, ವಿದ್ಯಾರ್ಥಿನಿಗಳು ಬಸ್ ಕಂಡಕ್ಟರ್ ನ‌ ಅಟ್ಟಡಿಸಿದ್ದಾರೆ. ಅಲ್ಲಿಂದ ಎದ್ನೋ ಬಿದ್ನೋ ಓಡಿದ್ದಾನೆ. ಉಪೇಂದ್ರನ ಗ್ರಾಹಚರ ಅಲ್ಲೂ ಕೆಟ್ಟಿತ್ತು. ಕಾಲೇಜ್ ನಿಂದ ತೆಂಕನಿಡಿಯೂರ್ ಕಡೆ ಓಡುತ್ತಿದ್ದ ಈತ ನಡತೆ ಕಂಡು ಸ್ಥಳೀಯ ದಸಂಸ ಮುಖಂಡರ ಕೈಗೆ ಸಿಕ್ಕಿಬಿದ್ದಿದ್ದಾನೆ. ಅಲ್ಲಿ ಆತನನ್ನು ಹಿಡಿದು ಬಾಯಿ ಬಿಡಿಸಿದಾಗ ಘಟನೆ ವಿವರಿಸುತ್ತಿದ್ದಂತೆ ನೇರ ಕಾಲೇಜ್ ಗೆ ಕರೆದುಕೊಂಡು ಹೋಗಿ ವಿದ್ಯಾರ್ಥಿನಿಯರ ಕೈಗೆ‌ ಕಂಡಕ್ಟರ್ ನನ್ನು ದಸಂಸ ಮುಖಂಡ ನೀಡಿದ್ದಾರೆ.

ದಿನ ನಿತ್ಯ ಕಿರಿಕುಳ ನೀಡುತ್ತಿದ್ದವನು ಈತನೇ ಎಂದು ತಿಳಿದು ಮತ್ತೆ ಉಪೇಂದ್ರನನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ್ದಾರೆ ನರ್ಸಿಂಗ್ ಕಾಲೇಜ್ ನ ವಿದ್ಯಾರ್ಥಿನಿಯರು. ಬಳಿಕ ಉಡುಪಿ ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಕಾಮುಕ ಬಸ್ ಕಂಡಕ್ಟರ್ ಪೊಲೀಸ ಅತಿಥಿಯಾಗಿದ್ದಾನೆ.

 

 

Related Articles

Leave a Reply

Your email address will not be published. Required fields are marked *

Back to top button
error: Content is protected !!