ಸರಕಾರ ಪೂರಕ ಬಜೆಟ್ನಲ್ಲಿ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಅನುದಾನ ಘೋಷಿಸಲಿ
ಪ್ರಸ್ತುತ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸಮಸ್ತ ಬಿಲ್ಲವ ಈಡಿಗ ಸಮುದಾಯದ ಸುಧಾರಣೆಯ ಆಶಯದಿಂದ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ರಚನೆಯ ಕುರಿತು ನಿಗದಿತ ಅನುದಾನದ ಭರವಸೆಯನ್ನು ನೀಡಿತ್ತು. ಆದರೆ ಸದ್ರಿ ಬಜೆಟ್ನಲ್ಲಿ ಇದ್ಯಾವುದರ ಸುದ್ದಿಯೆ ಇಲ್ಲವಾಗಿದೆ ಸಮಾಜಬಾಂಧವರು ಮತ್ತೆ ಸಮಾವೇಶದಂತಹ ಸಂಘಟಿತ ಪ್ರಯತ್ನಗಳಿಗೆ ಮುಂದಾಗುವ ಮುನ್ನ ಸರ್ಕಾರ ಪೂರಕ ಬಜೆಟ್ ಮುಖಾಂತರ ನಿಗಮವನ್ನು ಸೂಕ್ತ ಅನುದಾನದೊಂದಿಗೆ ವ್ಯವಸ್ಥಿತವಾಗಿ ಅನುಷ್ಠಾನಗೊಳಿಸುವಂತೆ ಬೇಡಿಕೆಯಿಡುತ್ತಿದ್ದೇವೆ.ಈ ಕುರಿತು ಉಡುಪಿ ಶಾಸಕರಾದ ಸನ್ಮಾನ್ಯ ಯಶ್ಪಾಲ್ ಸುವರ್ಣರವರು ಅಧಿವೇಶನದಲ್ಲಿ ನಿಗಮಕ್ಕೆ ಅನುದಾನ ಕುರಿತು ಬೇಡಿಕೆ ಮಂಡಿಸಿರುವುದು ಅಭಿನಂದನಾರ್ಹ.ಇದೇ ರೀತಿ ಕರಾವಳಿ ಭಾಗದಲ್ಲಿ ಬಿಲ್ಲವರ ನಿರ್ಣಾಯಕ ಮತಗಳನ್ನು ಪಡೆದು ಆಯ್ಕೆಯಾದ ಜನಪ್ರತಿನಿಧಿಗಳು ಕೂಡ ಸರ್ಕಾರವನ್ನು ಒತ್ತಾಯಿಸಬೇಕೆನ್ನುವುದು ನಮ್ಮ ಮನವಿಯಾಗಿದೆ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ) ಅಧ್ಯಕ್ಷರಾದ ಪ್ರವೀಣ್ ಎಂ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದರು.