ಬೇಬಿ ಪೌಡರ್ನಿಂದ ಕ್ಯಾನ್ಸರ್: ಕಂಪನಿಗೆ ಬರೋಬ್ಬರಿ $18.8 ಮಿಲಿಯನ್ ದಂಡ ವಿಧಿಸಿದ ನ್ಯಾಯಾಧೀಶರು!
ವಾಷಿಂಗ್ಟನ್: ಬೇಬಿ ಪೌಡರ್ ಜಾನ್ಸನ್ & ಜಾನ್ಸನ್ (J&J)ಭಾರಿ ಹಿನ್ನಡೆ ಅನುಭವಿಸಿದೆ. ಅದರ ಪೌಡರ್ ಬಳಸಿ ಮಾರಣಾಂತಿಕ ಕ್ಯಾನ್ಸರ್‌ಗೆ ಬಲಿಯಾಗಿದ್ದೇನೆ ಎಂದು ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದಾರೆ. ನ್ಯಾಯಾಧೀಶರು ಈ ವಿಷಯವನ್ನು ಆಲಿಸಿ, ಕಂಪನಿಗೆ ಭಾರಿ ದಂಡ ಪಾವತಿಸಲು ಆದೇಶಿಸಿದ್ದಾರೆ. ಕಂಪನಿಯು ಇದೀಗ ಆ ವ್ಯಕ್ತಿಗೆ $18.8 ಮಿಲಿಯನ್ (ರೂ. 1.5 ಬಿಲಿಯನ್) ಪಾವತಿಸಬೇಕಾಗಿದೆ.
ಏನಿದು ವಿಷಯ?
ಕ್ಯಾಲಿಫೋರ್ನಿಯಾದ ನಿವಾಸಿ ಎಮೋರಿ ಹೆರ್ನಾಂಡೆಜ್ ವಲಾಡೆಜ್ ಅವರು ಜಾನ್ಸನ್ ಮತ್ತು ಜಾನ್ಸನ್ ಕಂಪನಿಯ ಬೇಬಿ ಪೌಡರ್ ಬಳಸಿದ್ದರಿಂದ ಕ್ಯಾನ್ಸರ್ ಬಂದಿದೆ ಎಂದು ತೀರ್ಪುಗಾರರ ಮುಂದೆ ಸಾಬೀತುಪಡಿಸಿದ್ದಾರೆ. ಹರ್ನಾಂಡೆಜ್ ಕಳೆದ ವರ್ಷ ಜಾನ್ಸನ್ ಮತ್ತು ಜಾನ್ಸನ್ ವಿರುದ್ಧ ಓಕ್ಲ್ಯಾಂಡ್‌ನ ಕ್ಯಾಲಿಫೋರ್ನಿಯಾ ರಾಜ್ಯ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದರು. 24 ವರ್ಷದ ಹೆರ್ನಾಂಡೆಜ್ ಅವರು ಬಾಲ್ಯದಿಂದಲೂ ಕಂಪನಿಯ ಟಾಲ್ಕಮ್ ಪೌಡರ್‌ಗೆ ಹೆಚ್ಚು ಒಗ್ಗಿಕೊಂಡ ಪರಿಣಾಮವಾಗಿ ತನ್ನ ಹೃದಯದ ಸುತ್ತಲಿನ ಅಂಗಾಂಶದಲ್ಲಿ ಮೆಸೊಥೆಲಿಯೊಮಾ ಎಂಬ ಮಾರಣಾಂತಿಕ ಕ್ಯಾನ್ಸರ್ ಅಭಿವೃದ್ಧಿಯಾಗಿದೆ ಎಂದು ಹೇಳಿದ್ದಾರೆ.
ನ್ಯಾಯಾಧೀಶರು ಹೇಳಿದ್ದೇನು?
ನ್ಯಾಯಾಧೀಶರು ಹೆರ್ನಾಂಡೆಜ್ ಮೆಡಿಕಲ್ ಬಿಲ್, ನೋವು ಮತ್ತು ಸಂಕಟ ಗಮನಿಸಿ ಪರಿಹಾರ ಪಡೆಯಲು ಸಂಪೂರ್ಣವಾಗಿ ಅರ್ಹನಾಗಿದ್ದಾನೆ ಎಂದು ಹೇಳಿದೆ. ಆದರೆ J&J ನ ವ್ಯಾಜ್ಯಗಳ ಉಪಾಧ್ಯಕ್ಷ ಎರಿಕ್ ಹಾಸ್, ಕಂಪನಿಯು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಿದೆ ಎಂದು ತಿಳಿಸಿದ್ದಾರೆ. ಜಾನ್ಸನ್ ಬೇಬಿ ಪೌಡರ್ ಸುರಕ್ಷಿತವಾಗಿದೆ. ಕ್ಯಾನ್ಸರ್ ಅಂಶವನ್ನು ಹೊಂದಿರುವುದಿಲ್ಲ ಮತ್ತು ಕ್ಯಾನ್ಸರ್ ಉಂಟುಮಾಡುವುದಿಲ್ಲ ಎಂದು ಹೇಳಿದೆ.