ಕರಾವಳಿ

ಉಡುಪಿ ನಗರಸಭೆ ವಡಬಾಂಡೇಶ್ವರ ವಾರ್ಡಿನ ಅಪೂರ್ಣ ಕಾಂಕ್ರೆಟ್ ರಸ್ತೆ : ನಗರಸಭೆ ಸದಸ್ಯನ ಕುತಂತ್ರ !

ಮಲ್ಪೆ ವಡಬಾಂಡೇಶ್ವರ ವಾರ್ಡಿನ ನೆರ್ಗಿ ಎಂಬಲ್ಲಿ ಸರ್ವೆ ನಂಬರ್ 304/10 ರಲ್ಲಿ ಹಾದು ಹೋಗುವ ಸಾರ್ವಜನಿಕ ರಸ್ತೆಯನ್ನು ಈ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ದಿನಾಂಕ 19.03.2024ರಂದು ಹೊಸದಾಗಿ ಕಾಂಕ್ರೀಟ್ ರಸ್ತೆಯನ್ನು ದಕ್ಷಿಣದಿಂದ ಪೂರ್ವಾಭಿಮುಖವಾಗಿ ಉತ್ತರಕ್ಕೆ ನಿರ್ಮಿಸಿದ್ದು ಕಮಲ ನಿವಾಸ ಮನೆಯ ಮುಂಬಾಗದಲ್ಲಿ 5 ಮೀಟರ್ ಮಣ್ಣಿನ ರಸ್ತೆಯನ್ನು ಕಾಂಕ್ರೀಟ್ ಹಾಕದೆ ಹಾಗೆಯೇ ಬಿಟ್ಟು ರಸ್ತೆಯನ್ನು ಮುಂದಕ್ಕೆ ನಿರ್ಮಿಸಿದ್ದು ಇದು ವಾರ್ಡಿನ ಸದಸ್ಯನ ರಾಜಕೀಯ ಕುತಂತ್ರ ವಾಗಿರುತ್ತದೆ ಎಂದು ಸ್ಥಳೀಯರು ತಿಳಿಸಿದರು . 5 ಮೀಟರ್ ಬಿಟ್ಟು ನಿರ್ಮಿಸಲಾಗಿರುವ ಈ ರಸ್ತೆಯು ಸಾರ್ವಜನಿಕ ರಸ್ತೆಯಾಗಿದ್ದು ಮುಂದಕ್ಕೆ ಅದನ್ನೇ ದಾಟಿ ಹೋಗಬೇಕಾಗಿದ್ದರಿಂದ ಈ ರೀತಿಯ ತಾರತಮ್ಯ ಕುತಂತ್ರ ಯೋಜನೆ ನಗರ ಸಭೆಗೆ ಶೋಭೆ ತರುತ್ತದೆಯೇ? ಇಂತಹ ಕಾರ್ಯ ಉಡುಪಿ ನಗರಸಭೆಯ ಅಭಿವೃದ್ಧಿ ಯಾವ ರೀತಿಯಲ್ಲಿ ಸಾಗುತ್ತಿದೆ ಎಂದು ತೋರಿಸುತ್ತದೆ.

ಈ ವಿಚಾರವನ್ನು ಪೌರಾಯುಕ್ತರ ಗಮನಕ್ಕೆ ತಂದರೂ ಯಾವ ರೀತಿಯ ಕ್ರಮ ತೆಗೆದುಕೊಂಡಿರುವುದಿಲ್ಲ! ಅಭಿವೃದ್ಧಿ ಕಾರ್ಯವು ಯಾವಾಗಲೂ ಎಲ್ಲಾ ಸಾರ್ವಜನಿಕರಿಗೆ ಸದುಪಯೋಗ ಆಗುವಂತಿರಬೇಕು ಇದರಲ್ಲಿ ಯಾವತ್ತೂ ರಾಜಕೀಯ ಮಾಡಬಾರದು. ಉಡುಪಿ ನಗರಸಭೆಯ ಪೌರಾಯುಕ್ತರು ಮತ್ತು ಮಾನ್ಯ ಶಾಸಕರು ಇದನ್ನು ಗಮನದಲ್ಲಿ ಇಟ್ಟುಕೊಂಡು ಮುಂದೆ ಈ ರೀತಿಯ ತಾರತಮ್ಯ ಕುತಂತ್ರ ನಡೆಯದ ಹಾಗೇ ಎಚ್ಚರಿಕೆ ವಹಿಸಬೇಕು ಮತ್ತು ಇಂತಹ ಕಾಮಗಾರಿಕೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.

Related Articles

Leave a Reply

Your email address will not be published. Required fields are marked *

Back to top button
error: Content is protected !!