
ಒತ್ತುವರಿಯಾಗಿರುವ ವಕ್ಸ್ ಆಸ್ತಿಗಳನ್ನು ತೆರವುಗೊಳಿಸಲು ವಕ್ಸ್ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO)ಗೆ ಅಧಿಕಾರವಿಲ್ಲ ಎಂದು ಹೈಕೋರ್ಟ್ (ದಾರವಾಡ ಪೀಠ) ಸ್ಪಷ್ಟಪಡಿಸಿದೆ. ವಕ್ಸ್ ಮಂಡಳಿಗೆ ಸೇರಿದ ಜಮೀನಿನ ಒತ್ತುವರಿ ತೆರವುಗೊಳಿಸಲು ಮಂಡಳಿಯ ಸಿಇಒ ಆದೇಶ ಪ್ರಶ್ನಿಸಿ ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಕುಡಚಿ ನಗರದ ಸಹೇಬಲಾಲ್ ಮತ್ತು ಮುನೋರುದ್ದೀನ್ ಎಂಬುವರು ಸಲ್ಲಿಸಿದ್ದ ಅರ್ಜಿ ಕುರಿತು ಧಾರವಾಡ ಪೀಠದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ನೀಡಿದೆ. ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ, “ವಕ್ಸ್ ಕಾಯಿದೆಯಡಿ ತಿಳಿಸಿರುವಂತೆ ಮಂಡಳಿ ಸಿಇಒ ವಕ್ಸ್ ಆಸ್ತಿಗಳ ಒತ್ತುವರಿ ಸಂಬಂಧ ದೂರು ಸ್ವೀಕರಿಸುವುದು, ಒತ್ತುವರಿದಾರರಿಗೆ ನೋಟಿಸ್ ನೀಡಿ ಆಕ್ಷೇಪಣೆಗಳನ್ನು ಸ್ವೀಕರಿಸಿ, ಅದನ್ನು ಪರಿಶೀಲಿಸಿ ಒತ್ತುವರಿ ತೆರವು ಮಾಡುವಂತೆ
ಆದೇಶಿಸಬಹುದು. ಆದರೆ, ಒತ್ತುವರಿ ತೆರವುಗೊಳಿಸುವ ಪ್ರಕ್ರಿಯೆ ನಡೆಸಲು ಅವಕಾಶವಿಲ್ಲ” ಎಂದು ಸ್ಪಷ್ಟಪಡಿಸಿದೆ.
ಈ ವಲ್ಫ್ ಆಸ್ತಿ ಒತ್ತುವರಿ ಸಂಬಂಧ ದೂರು ದಾಖಲಾಗಿದ್ದು, ಆ ಸಂಬಂಧ ಸಿಇಒ ಒತ್ತುವರಿದಾರರಿಗೆ ನೋಟಿಸ್ ನೀಡಿದ್ದಾರೆ. ಜತೆಗೆ, ಆಕ್ಷೇಪಣೆಗಳನ್ನು ಸ್ವೀಕರಿಸಿ ಉದ್ದೇಶಿತ ಜಮೀನು ವಕ್ಸ್ ಮಂಡಳಿಗೆ ಸೇರಿರುವುದಾಗಿ ತಿಳಿಸಿ ಒತ್ತುವರಿದಾರರು ತೆರವುಗೊಳಿಸುವಂತೆ ನಿರ್ದೇಶಿಸುವ ಆದೇಶ ಹೊರಡಿಸಿದ್ದಾರೆ. ಈ ಆದೇಶ ತೆರವು ಮಾಡಿಸುವ ಪ್ರಕ್ರಿಯೆ ಆರಂಭಿಸಿದಂತಾಗುವುದಿಲ್ಲ, ಎಂದು ನ್ಯಾಯಾಲಯ ತಿಳಿಸಿದೆ.
ಒತ್ತುವರಿಯಿಂದ ವಕ್ಸ್ ಮಂಡಳಿಗೆ ಆಗಿರುವ ಹಾನಿಯ ಪ್ರಮಾಣ ನಿರ್ಧರಿಸಲು ಜಿಲ್ಲಾ ವಕ್ಸ್ ಸಲಹಾ ಸಮಿತಿಗೆ ಮನವಿ ಮಾಡಿದ್ದಾರೆ. ಜತೆಗೆ, ಒತ್ತುವರಿ ಆದೇಶಕ್ಕಾಗಿ ವಕ್ಸ್ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಲು ನಿರ್ದೇಶಿಸಿದ್ದಾರೆ. ಸಿಇಒ ಆದೇಶ ಒತ್ತುವರಿ ತೆರವುಗೊಳಿಸುವ ಆದೇಶಕ್ಕೆ ಸಮನಾಗುವುದಿಲ್ಲ. ಆದ್ದರಿಂದ ಈ ಸಂಬಂಧ ವಕ್ಸ್ ನ್ಯಾಯಮಂಡಳಿ ಸೂಕ್ತ ಆದೇಶ ಹೊರಡಿಸುವವರೆಗೂ ಸಿಇಒ ಅರ್ಜಿದಾರರು ಒತ್ತುವರಿ ಮಾಡಿರುವ ಆರೋಪದ ಆಸ್ತಿಯನ್ನು ವಕ್ಸ್ ಮಂಡಳಿಗೆ ವ್ಯಾಪ್ತಿಗೆ ವಶಪಡಿಸಿಕೊಳ್ಳುವಂತಿಲ್ಲ, ಎಂದು ಹೇಳಿ ಅರ್ಜಿ ಇತ್ಯರ್ಥಪಡಿಸಿದೆ.














