
ಕುಂದಾಪುರ: ದ.ಕ – ಉಡುಪಿ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್‌ನ ಇದರ ಕುಂದಾಪುರ – ಬೈಂದೂರು ಘಟಕದ ಅಧ್ಯಕ್ಷರಾಗಿ ನಾವುಂದ ಸ್ಮಾರ್ಟ್ ಟೆಕ್ ಮಾಲಿಕ ಮಹೇಶ್ ಪೂಜಾರಿ ಹಾಗೂ ಕಾರ್ಯದರ್ಶಿಯಾಗಿ ಎಂ2ಕೆ ಮೊಬೈಲ್ ಕುಂದಾಪುರದ ಕರುಣಾಕರ ಆಚಾರ್ಯ ಮರವಂತೆ ಆಯ್ಕೆಯಾಗಿದ್ದಾರೆ.

(ಕರುಣಾಕರ ಆಚಾರ್ಯ)
ಇತ್ತಿಚಿಗೆ ಕುಂದಾಪುರದ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕುಂದಾಪುರ ಮತ್ತು ಬೈಂದೂರು ತಾಲೂಕಿನ ಮೊಬೈಲ್ ರಿಪೇರಿ ಮತ್ತು ಮಾರಾಟಗಾರ ಯೂನಿಯನ್ ರಚಿಸುವ ಕುರಿತು ನಿರ್ಣಯಿಸಲಾಯಿತು. ಸಭೆಯಲ್ಲಿ ಪ್ರಸ್ತುತ ಮೊಬೈಲ್ ಕ್ಷೇತ್ರದಲ್ಲಿ ವ್ಯವಹಾರ ಮಾಡುತ್ತಿರುವವರ ಸಂಕಷ್ಟ ಹಾಗೂ ಅದಕ್ಕೆ ಪರಿಹಾರ ಮಾರ್ಗೋಪಾಯ ಮತ್ತು ಇತ್ತೀಚಿನ ಅನಾರೋಗ್ಯಕರ ಸ್ಪರ್ಧೆ ಎಲ್ಲರ ಆರ್ಥಿಕ ಕುಂಟಿತಕ್ಕೆ ಕಾರಣವಾಗುತ್ತಿದೆ ಅನ್ನುವ ಅಭಿಪ್ರಾಯ ಮೂಡಿತು. ಇದೆಲ್ಲದಕ್ಕೂ ಪರಿಹಾರ ಸಂಘಟನೆ ಒಂದೇ ಎನ್ನುವ ತೀರ್ಮಾನಕ್ಕೆ ಬಂದು ಉಡುಪಿ ಯೂನಿಯನ್ ಮಾರ್ಗದರ್ಶನದಲ್ಲಿ ತಾಲೂಕು ಸಮಿತಿ ರಚಿಸಲಾಯಿತು.
ಗೌರವಧ್ಯಕ್ಷರಾಗಿ ಇರ್ಷಾದ್ ಕ್ಲಾಸಿಕ್ ಮೊಬೈಲ್ ಕುಂದಾಪುರ, ಗೌರವ ಸಲಹೆಗಾರರಾಗಿ ಪ್ರಕಾಶ್ ಪೈ ಮಹಾಮ್ಮಯಿ ಮೊಬೈಲ್ ಕೊಟೇಶ್ವರ, ಮಾಚ ಮೊಗವೀರ ಶಿರೂರು, ಅಧ್ಯಕ್ಷರಾಗಿ ಮಹೇಶ್ ಪೂಜಾರಿ ಸ್ಮಾರ್ಟ್ ಟೆಕ್ ನಾವುಂದ, ಕಾರ್ಯದರ್ಶಿಯಾಗಿ : ಕರುಣಾಕರ ಆಚಾರ್ಯ ಮರವಂತೆ ಎಂ2ಕೆ ಮೊಬೈಲ್ ಕುಂದಾಪುರ, ಉಪಾಧ್ಯಕ್ಷರಾಗಿ ರಾಘವೇಂದ್ರ ಶ್ರೀ ಟೆಕ್ ರವಿ ಶೆಟ್ಟಿ ಶ್ರೀ ಬೆನಕ ಬಿಡ್ಕಲ್ ಕಟ್ಟೆ ನಾಗೇಂದ್ರ ನಾಯ್ಕ ಓಷಿಯನ್ ಮೊಬೈಲ್ ಉಪ್ಪುಂದ ಆಯ್ಕೆಯಾದರು.
ಸಂಸ್ಥೆಯಲ್ಲಿ ಸುರೇಶ್ ಸನ್ನಿದಿ ಕೋಟೇಶ್ವರ, ರಾಹುಲ್ ವಿಘ್ನಶ್ ತೆಕ್ಕಟ್ಟೆ, ಅಶೋಕ್ ಸಾಯಿ ಕಮ್ಯುನಿಕೇಷನ್, ವಿದ್ಯಾದರ ಶೈನ್ ಕೋಟೇಶ್ವರ, ಮೊಹಮ್ಮದ್ ಅಶ್ರಫ್ ಸೆಲ್ ಇನ್ ಟೌನ್ ಬೈಂದೂರು, ಅನಿಲ್ ಕೆ ಶೈನ್ ಕುಂದಾಪುರ, ರಾಜೇಶ್ ಮೊಬೈಲ್ ಪ್ಯಾಲೇಸ್, ನೌಶಾದ್ ಸ್ಪೀಡ್ ಮೊಬೈಲ್, ಸಲ್ಮಾನ್ ಮೊಬೈಲ್ ಕಿಂಗ್, ಗೋಪಾಲ ಜಾಹ್ನವಿ ವಂಡ್ರೆ, ಅಜಿತ್ ದುರ್ಗಾ ಮೊಬೈಲ್ ಸಿದ್ದಾಪುರ, ಪ್ರಕಾಶ್ ಓಂಕಾರ್ ಗಂಗೊಳ್ಳಿ, ಮುಸ್ತಫಾ ಮೊಬೈಲ್ ಎಕ್ಸ್ ಕುಂದಾಪುರ, ಪ್ರಕಾಶ್ ಪೂಜಾರಿ ಜೆ.ಕೆ ಮೊಬೈಲ್, ನಿತಿನ್ ಮೊಬೈಲ್ ಗ್ಯಾರೇಜ್ ಕೋಟ ಅವರು ಸದಸ್ಯರಾದರು.














