
ನವದೆಹಲಿ : ಇದುವರೆಗೆ ಬ್ಯಾಂಕ್ ಗ್ರಾಹಕರಿಗೆ ಎಟಿಎಂ ನಿಂದ ಹಣ ಪಡೆಯಲು ಪಿನ್ ನಂಬರ್ ಹೊಡೆದ್ರೆ ಸಾಕು, ಕಾರ್ಡ್ ಮಿತಿಯಂತೆ ಹಣ ಡ್ರಾ ಆಗ್ತಾ ಇತ್ತು. ಆದ್ರೇ.. ಸೈಬರ್ ಕಳ್ಳರ ಕೈಚಳಕ ಜಾಸ್ತಿಯಾಗುತ್ತಿರುವ ಕಾರಣದಿಂದಾಗಿ, ಬ್ಯಾಂಕ್ ಗ್ರಾಹಕರ ಖಾತೆ ಭದ್ರತೆಗೊಳಿಸುವ ನಿಟ್ಟಿನಲ್ಲಿ, ಇಂದಿನಿಂದ 10 ಸಾವಿರ ಮೇಲಿನ ಯಾವುದೇ ಹಣ ವಿತ್ ಡ್ರಾಗೆ, ಒಟಿಪಿ ಕಡ್ಡಾಯವಾಗಿದೆ.
ಇಂತಹ ನಿಯಮವನ್ನು ಭಾರತೀಯ ಸ್ಟೇಟ್ ಬ್ಯಾಂಕ್(ಎಸ್ ಬಿ ಐ) ಇಂದಿನಿಂದ ಜಾರಿಗೆ ತಂದಿದ್ದು, ಎಸ್ ಬಿ ಐ ಎಟಿಎಂ ಬಳಸುವಂತ ಬ್ಯಾಂಕ್ ಗ್ರಾಹಕರು ಎಟಿಎಂ ನಿಂದ 10 ಸಾವಿರ ಮೇಲಿನ ಹಣ ಹಿಂತೆಗೆದುಕೊಳ್ಳಲು, ಗ್ರಾಹಕರ ಬ್ಯಾಂಕ್ ಖಾತೆಗೆ ಒಟಿಪಿ ಬರಲಿದೆ. ಎಟಿಎಂ ನಲ್ಲಿ ಗ್ರಾಹಕರಿಗೆ ಬರುವಂತ ಒಟಿಪಿ ಸಂಖ್ಯೆಯನ್ನು ಎಟಿಎಂ ಪಿನ್ ನಂತ್ರ ನಮೂದಿಸಿದ್ರೇ ಮಾತ್ರವೇ ಹಣ ವಿತ್ ಡ್ರಾಗೆ ಸಾಧ್ಯವಾಗಲಿದೆ.