
ಕಡಬ : ಆಲಂಕಾರಿನಲ್ಲಿ ಕರ್ತವ್ಯ ನಿರತ ಪೋಲಿಸ್ ಸಿಬ್ಬಂದಿ ಯೊಂದಿಗೆ ಅನುಚಿವಾಗಿ ವರ್ತಿಸಿದ ಆರೋಪದಲ್ಲಿ ನಾಲ್ವರು ಹಾಗೂ ಜೀಪು, ರಿಕ್ಷಾವನ್ನು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.
ಕರ್ತವ್ಯ ನಿರತ ಪೋಲಿಸ್ ಸಿಬ್ಬಂದಿಯೊಂದಿಗೆ ಪಿಶ್ ಲ್ಯಾಂಡ್ ಹೋಟೆಲ್ ನಲ್ಲಿದ್ದ ವೇಳೆ ಜೀಪು ಹಾಗೂ ಅಟೋದಲ್ಲಿ ಬಂದ ಸಂಜೀವ, ಶೇಖರ, ಉದಯ, ಶಿಯಾಬ್ ಎಂಬವರು ಅನುಚಿವಾಗಿ ವರ್ತಿಸಿದ್ದಾರೆಂದು ಆರೋಪ ವ್ಯಕ್ತವಾಗಿ ಬಳಿಕ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಹಾಗೂ ಅವರು ಚಲಾಯಿಸುತ್ತಿದ್ದ ವಾಹನ ಜೀಪು ಹಾಗೂ ಅಟೋ ರಿಕ್ಷಾವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.