
ಬಾರ್ಕೂರು : ದೇವಸ್ಥಾನಗಳ ಊರು ಬಾರ್ಕೂರು ಇತಿಹಾಸ ಪ್ರಸಿದ್ಧವಾದ ಸ್ಥಳ. ಇಂಥ ಪ್ರಸಿದ್ಧ ಸ್ಥಳದಲ್ಲಿ ದೈವಸ್ಥಾನದ ಹೆಸರಲ್ಲಿ ಜಾಗ ಅತಿಕ್ರಮಣ ಮಾಡಿ ಅಸಹಾಯಕರ ಮೇಲೆ ದಬ್ಬಾಳಿಕೆ ಮಾಡಿದ ಘಟನೆ ಬಾರ್ಕೂರಿನಲ್ಲಿ ಬೆಳಕಿಗೆ ಬಂದಿದೆ.
ಬಾರಕೂರು ಹನೇಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸ. ನ 126/3C ರಲ್ಲಿ 0.08 ಸೆಂಟ್ಸ್ ಕೃಷಿ ಜಮೀನಿನು ದಿವಂಗತ ಬಚ್ಚ ಪೂಜಾರಿಯವರ ಹೆಸರಲ್ಲಿ ಇದ್ದು ಈ ಜಾಗದ ಸಮಗ್ರ ದಾಖಲೆ ಬಚ್ಚ ಪೂಜಾರಿಯವರ ಹೆಸರಲ್ಲಿ ಇದೆ. ಈ ಕೃಷಿ ಜಮೀನು ಬಾರಕೂರು ಹನೇಹಳ್ಳಿ ಗ್ರಾಮದ ಶ್ರೀ ಚಿಕ್ಕಮ್ಮ ಬ್ರಹ್ಮಲಿಂಗೇಶ್ವರ ದೈವಸ್ತಾನದ ಎದುರುಗಡೆ ಇರೋ ಜಮೀನು ಆಗಿದೆ. ಬಚ್ಚ ಪೂಜಾರಿ ಅವರಿಗೆ( 6) ಆರು ಜನ ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರ,ದಿವಂಗತ ಬಚ್ಚ ಪೂಜಾರಿ -ಕ್ರಷಿ ಕೂಲಿ ಹಾಗೂ ಹೆಸರಾಂತ ಆಯುರ್ವೇದ ಪಂಡಿತರಾಗಿದ್ದರು. ಇವತ್ತು ಸಹ ಇವರ ಮನೆಯನ್ನು ಪಂಡಿತರ ಮನೆ ಎಂದೇ ಕರೆಯುತ್ತಾರೆ. ಮೇಲಿನ ಜಮೀನು ಭೂಸುಧಾರಣಾ ಕಾಯ್ದೆಯಲ್ಲಿ ಬಂದ ಜಮೀನು ಆಗಿರುತ್ತದೆ. ಸದ್ರಿ ಜಮೀನಿನಲ್ಲಿ ಬತ್ತ, ಸೌತೆ, ಗೆಣಸು ಹಾಗೂ ತರಕಾರಿ ಬೆಳೆಯುತ್ತಿದ್ದರು. ಮೇಲಿನ ದೈವಸ್ಥಾನದ ಜಾತ್ರೆ ಸಂದರ್ಭದಲ್ಲಿ 3ದಿನ ಮಡಲು (ತೆಂಗಿನ ಗರಿಯ) ಚಪ್ಪರ ಹಾಕಲು ಮಾನವೀಯತೆ ನೆಲೆಯಲ್ಲಿ ಬಿಡುತ್ತಿದ್ದರು, ಜಾತ್ರೆ ಮುಗಿದ ನಂತರ ಹಿಂದಿನಂತೆ ಕೃಷಿ ಚಟುವಟಿಕೆ ಮಾಡುತಿದ್ದರು.ಬಚ್ಚ ಪೂಜಾರಿಯವರ ಮಗ ಚಂಪಾ ಪೂಜಾರಿ ವಿದ್ಯಾವಂತರಾಗಿದ್ದು ನಿವೃತ್ತ ಟೀಚರ್ ಆಗಿರತ್ತಾರೆ. ಉಳಿದ ಹೆಣ್ಣುಮಕ್ಕಳು ಅನಕ್ಷರಸ್ತರಾಗಿದ್ದು. ಕೃಷಿ -ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಚಾಂಪ ಪೂಜಾರಿ ಹಾಗೂ ಹೆಣ್ಣು ಮಕ್ಕಳಲ್ಲಿ ಆಸ್ತಿ ಪಾಲಿನ ವಿಷಯದಲ್ಲಿ ಬಿನ್ನಾಭಿಪ್ರಾಯ ಬಂದು ಆಸ್ತಿ ವಿವಾದ ಕುಂದಾಪುರ ಕೋರ್ಟ್ ಮೆಟ್ಟಿಲು ಹತ್ತಿತ್ತು. ಕೋರ್ಟ್ನಲ್ಲಿ ಎಲ್ಲರಿಗೂ ಸಮಾನ ಹಕ್ಕಿನಂತೆ ತೀರ್ಪು ಬಂದಿತ್ತು ನಂತರ ಚಂಪಾ ಪೂಜಾರಿ ಹೈಕೋರ್ಟ್ ಮೆಟ್ಟಿಲೇರಿದ್ದರು ಹೈಕೋರ್ಟ್ ಸಹ ಕೆಳಗಿನ ಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿತ್ತು. ನಂತರ ಸುಪ್ರೀಂ ಕೋರ್ಟ್ ಗೆ ಆತ ಮೇಲ್ಮನವಿ ಸಲ್ಲಿಸಿದ್ದು ಪ್ರಸ್ತುತ ಸುಪ್ರೀಂ ಕೋರ್ಟ್ನಲ್ಲಿ ಪಾಲು ವ್ಯಾಜ್ಯ ನಡೆಯುತ್ತಿದೆ.
ಕಳೆದ 2ವರ್ಷದ ಹಿಂದೆ ಚಿಕ್ಕಮ್ಮ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ದೈವ ಸ್ಥಾನದ ಎದುರಿನ ಗದ್ದೆಯಲ್ಲಿ ಬಚ್ಚ ಪೂಜಾರಿ ಮಕ್ಕಳ ವಿರೋಧದ ನಡುವೆ 2 ದೈವದ ಕಲ್ಲನ್ನು ಬಲಾತ್ಕಾರದಿಂದ ಪ್ರತಿಷ್ಠಾಪನೆ ಮಾಡಿತು. ಇದನ್ನು ವಿರೋಧಿಸಿ ಬ್ರಹ್ಮವರ ಠಾಣೆಗೆ ದೂರು ನೀಡಲಾಯಿತು. ಸಿವಿಲ್ ವ್ಯಾಜ್ಯ ನ್ಯಾಯಾಲಯದಲ್ಲಿ ಇತ್ಯರ್ಥ ಪಡಿಸಕೊಳ್ಳುವಂತೆ ಪೊಲೀಸ್ ಇಲಾಖೆ ಹಿಂಬರಹ ನೀಡಿದರು. ಈಗ ಪುನಃ ಮೇಲಿನ ದೈವಸ್ಥಾನದ ಆಡಳಿತ ಮಂಡಳಿ ಮೇಲಿನ ಸ. ನಂಬರ್ ಜಮೀನಿನಲ್ಲಿ ಜಮೀನಿನ ವಾರಸುದಾರರ ವಿರೋಧದ ನಡುವೆ ಅಕ್ರಮವಾಗಿ ದಬ್ಬಾಳಿಕೆ ಯಿಂದ, ಬಚ್ಚ ಪೂಜಾರಿಯವರ ಮಕ್ಕಳ ಪಾಲುವ್ಯಾಜ್ಯದ ವಿಷಯದ ಬಿನ್ನಾಭಿಪ್ರಾಯದ ಲಾಭ ಪಡೆದು ಇಡೀ 0.08 ಸೆಂಟ್ಸ್ ಕೃಷಿ ಜಮೀನು ಅತಿಕ್ರಮಿಸಿ ಅದರಲ್ಲಿ ಕಾಂಕ್ರೀಟ್ ಪಿಲ್ಲರ್ ಅಳವಡಿಸಿ ಕಾಂಕ್ರೀಟ್ ಮಾಡು ಮಾಡುತ್ತಿದೆ ಈ ಬಗ್ಗೆ ಪೊಲೀಸರಿಗೆ ಎಲ್ಲಾ ದಾಖಲೆ ಹಾಜರು ಪಡಿಸಿ ದೂರು ನೀಡಿದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ.
ಈ ಬಗ್ಗೆ ಈ ಅಕ್ರಮ ಕಾಮಗಾರಿ ತೆರವು ಗೊಳಿಸಿ ಕೃಷಿ ಜಮೀನಿನಲ್ಲಿ ಹಿಂದಿನಂತೆ ಕೃಷಿ ಚಟುವಟಿಕೆ ನಡೆಸಲು ಅನುವು ಮಾಡಿ ಕೊಡುವಂತೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ. ಕಾನೂನು ಬಾಹಿರವಾಗಿ ಕ್ರಷಿ ಜಮೀನು ಅತಿಕ್ರಮಣ ಮಾಡಿದ ಆಡಳಿತ ಮಂಡಳಿಯ ಎಲ್ಲರ ಮೇಲೆ ಜಾಗದ ದಾಖಲೆ ಪರಿಶೀಲಿಸಿ ಕ್ರಿಮಿನಲ್ ಪ್ರಕರಣ ದಾಖಲು ಮಾಡುವಂತೆ ಪೊಲೀಸ್ ಇಲಾಖೆಗೆ ಸೂಚಿಸುವಂತೆ ಕೋರಲಾಗಿದೆ ಎಂದು ಬಚ್ಚ ಪೂಜಾರಿ ಮನೆಯವರು ಮಾಧ್ಯಮಕ್ಕೆ ಜಾಗದ ದಾಖಲೆ ಸಹಿತ ಮಾಹಿತಿ ನೀಡಿರುತ್ತಾರೆ.