
ಉಡುಪಿ ವಿಧಾನಸಭಾ ಕ್ಷೇತ್ರದ ನೀಲಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶ್ರೀ ಕೆ. ರಘುಪತಿ ಭಟ್ ರವರ ಶಿಫಾರಸ್ಸಿನ ಮೇರೆಗೆ ಅನುದಾನ ಮಂಜೂರಾಗಿದ್ದು, ಇಂದು ದಿನಾಂಕ 10-08-2021 ರಂದು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ, ಪೂರ್ಣಗೊಂಡ ಕಾಮಗಾರಿಗಳನ್ನು ಶಾಸಕ ಶ್ರೀ ಕೆ. ರಘುಪತಿ ಭಟ್ ರವರು ವೀಕ್ಷಿಸಿದರು.
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನೀಲಾವರ ಕ್ರಾಸ್ ನಿಂದ ಮಹಿಷಮರ್ದಿನಿ ದೇವಸ್ಥಾನದ ರಸ್ತೆ.
ಮಧ್ಯಸ್ಥರ ಬೆಟ್ಟು ಮಾರ್ಗವಾಗಿ ಎಳ್ಳಂಪಳ್ಳಿ ಕೊಕ್ಕರ್ಣೆ ರಸ್ತೆ.
ನೀಲಾವರ ಮಂಜುನಾಥ ನಾಯ್ಕ ಅಂಗಡಿಯಿಂದ ಚರ್ಚ್ ರಸ್ತೆಯ ಮೂಲಕ ಮಹಿಷಮರ್ದಿನಿ ದೇವಸ್ಥಾನದ ರಸ್ತೆ.
ಮಂಜುನಾಥ ನಾಯ್ಕ ಅಂಗಡಿಯಿಂದ ಹೆಬ್ಬಾರ ಬೆಟ್ಟು ಮಾರ್ಗವಾಗಿ ಎಳ್ಳಂಪಳ್ಳಿ ರಸ್ತೆ ಕಾಂಕ್ರೀಟಿಕರಣ ಸೇರಿದಂತೆ ಒಟ್ಟು ರೂ. 13.05 ಕೋಟಿ ಮೊತ್ತದ ಕಾಮಗಾರಿಗೆ ಚಾಲನೆ ನೀಡಿದರು.
ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಎಳ್ಳಂಪಳ್ಳಿ ನೀಲಾವರ ಗುಡ್ಡೆ ರಸ್ತೆ ಕಾಂಕ್ರೀಟಿಕರಣ – ರೂ. 2 ಕೋಟಿ ಮೊತ್ತದ ಕಾಮಗಾರಿಯನ್ನು ವೀಕ್ಷಿಸಿದರು.
ನಬಾರ್ಡ್ ಆರ್.ಐ.ಡಿ.ಎಫ್ ಯೋಜನೆಯಡಿ ರೂ. 17 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ನೀಲಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಜಾಲು ಅಂಗನವಾಡಿ ಕೇಂದ್ರವನ್ನು ವೀಕ್ಷಿಸಿದರು.
ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ. 3 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ನೀಲಾವರ ಕ್ರಾಸ್ ರಿಕ್ಷಾ ನಿಲ್ದಾಣವನ್ನು ವೀಕ್ಷಿಸಿದರು.
ಸ್ವಸಹಾಯ ಸಂಘಗಳ “ಸಂಜೀವಿನಿ” ಕಚೇರಿಯನ್ನು ವೀಕ್ಷಿಸಿದರು.
ರಸ್ತೆ ಅಭಿವೃದ್ಧಿಗೆ ಜಾಗವನ್ನು ಬಿಟ್ಟುಕೊಟ್ಟ ಭೂ ಮಾಲಕರನ್ನು ಸನ್ಮಾನಿಸಿ, ಕೋವಿಡ್ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಸಹಾಯಕರನ್ನು ಗೌರವಿಸಿ, ಅಸೌಖ್ಯದಿಂದ ಬಳಲುತ್ತಿರುವವರಿಗೆ ದಾನಿಗಳ ಮುಖಾಂತರ ಸಂಗ್ರಹಿಸಿದ ಸಹಾಯಧನವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ವೀಣಾ ನಾಯ್ಕ್, ನೀಲಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹೇಂದ್ರ ಕುಮಾರ್, ಉಪಾಧ್ಯಕ್ಷರಾದ ಬೇಬಿ ಎಸ್, ರಾಜ್ಯ ಬಿಜೆಪಿ ಎಸ್ ಟಿ ಮೋರ್ಚಾದ ಕಾರ್ಯದರ್ಶಿಗಳಾದ ಉಮೇಶ್ ನಾಯ್ಕ್, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ನಳಿನಿ ಪ್ರದೀಪ್ ರಾವ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಸುರೇಂದ್ರ ಅಡಿಗ, ನೀಲಾವರ ಮಹಿಷಮರ್ದಿನಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಎನ್. ರಘುರಾಮ್ ಮಧ್ಯಸ್ಥ, ಸ್ಥಳೀಯರಾದ ಬಾಲಕೃಷ್ಣ ಶೆಟ್ಟಿ, ಆರೂರು ತಿಮ್ಮಪ್ಪ ಶೆಟ್ಟಿ, ನೀಲಾವರ ಗ್ರಾಮ ಪಂಚಾಯತ್ ಸದಸ್ಯರುಗಳಾದ ರಮೇಶ್ ಪೂಜಾರಿ, ಉಮೇಶ್ ಶೆಟ್ಟಿ, ಜ್ಯೋತಿ ವಿ. ಶೆಟ್ಟಿ, ಶಿಲ್ಪಾ ಹರೀಶ್ ರಾವ್, ಸುಮಾ ದೇವಾಡಿಗ, ಪ್ರಿಯಾ ಎಚ್ ಹಾಗೂ ಪಿ.ಎಂ.ಜಿ.ಎಸ್.ವೈ ಸಹಾಯಕ ಅಭಿಯಂತರರಾದ ತ್ರಿನೇಶ್ ಮತ್ತು ಪಕ್ಷದ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.