
ಮ್ಯಾಂಗೋ,ಆಪಲ್,ಮಿಂಟ್,ಗೂವಾ ಪ್ಲವರ್ ಗಳ ನೂತನ ಉತ್ಪನ್ನಗಳನ್ನು
ಖ್ಯಾತ ಚಲನಚಿತ್ರ ನಟ ನವೀನ್ ಡಿ.ಪಡೀಲ್ ಮತ್ತು ಸಾಮಾಜಿಕ ಮುಖಂಡ ಹೈದರ್ ಪರ್ತಿಪ್ಪಾಡಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನವೀನ್ ಡಿ.ಪಡೀಲ್ ” ಈ ಪರಿಸರದ ಖ್ಯಾತ ಖನಿಜಯುಕ್ತ ನೀರಿನ ಘಟಕ ಆಕ್ಸಿಬ್ಲೂ ಸಂಸ್ಥೆಯು ಆಕ್ಸಿಬ್ಲೂ ಜೂಸು ಎಂಬ ಆಕರ್ಷಕ ಹೆಸರಿನ ಉತ್ಪನ್ನ ಹೊರ ತಂದಿರುವುದು ಭಾರೀ ಸಂತೋಷದ ವಿಷಯ. ಸಮಾಜಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡುವ ಮೂಲಕ ಎಲ್ಲೆಡೆ ಕೀರ್ತಿ ಪಡೆದಿರುವ ಆಝಾದ್ ಗ್ರೂಪ್ ಮಾಲಕರಾದ ಹಾಜಿ ಮನ್ಸೂರ್ ಅಹ್ಮದ್ ಆಝಾದ್ ರವರು ಈ ಎರಡು ಸಂಸ್ಥೆಗಳ ಮೂಲಕ ನೂರಾರು ಜನರಿಗೆ ಉದ್ಯೋಗ ಕಲ್ಪಿಸಿದ್ದಾರೆ.
ಹಿತ್ತಲ ಗಿಡ ಮದ್ದಲ್ಲ ಎಂಬಂತೆ ನಾವು ಹೊರಗಿನ ಉತ್ಪನ್ನಗಳನ್ನು ಬಳಸುವ ಬದಲು ನಮ್ಮ ಊರಿನ ಸಂಸ್ಥೆಗಳ ಉತ್ಪನ್ನಗಳನ್ನು ಖರೀದಿಸಿ ಸ್ವದೇಶೀ ವಸ್ತುಗಳಿಗೆ ಪ್ರೋತ್ಸಾಹ ನೀಡಬೇಕು.
ಇದು ನಮ್ಮದೇ ಸಂಸ್ಥೆ ಎಂದು ಭಾವಿಸಿ ಪ್ರತಿಯೊಬ್ಬರೂ ಆಕ್ಸಿಬ್ಲೂ ಸಂಸ್ಥೆಯ ಖನಿಜಯುಕ್ತ ನೀರು ಮತ್ತು ಆಕ್ಸಿಬ್ಲೂ ಜೂಸು ಬಳಸಬೇಕು.
ಸಮಾಜಕ್ಕೆ ಅನಿವಾರ್ಯ ವೆನಿಸಿರುವ ಬ್ಲೂಮೂನ್ ಕಂಪನಿಯ
ಆಕ್ಸಿಬ್ಲೂ ಸಂಸ್ಥೆಯನ್ನು ಬೆಳೆಸಿ ಉಳಿಸುವುದು ದಕ್ಷಿಣ ಕನ್ನಡ,ಉಡುಪಿ,ಕಾಸರಗೋಡು ಜಿಲ್ಲೆಯ ಜನತೆಯ ಕರ್ತವ್ಯ.
ಈ ಸಂಸ್ಥೆಯ ಕಾರ್ಮಿಕರು, ವಿತರಕರು ಸಹಿತ ಸರ್ವರು ಕೂಡ ಸಂಸ್ಥೆಯ ಯಶಸ್ಸಿನಲ್ಲಿ ಪಾಲುದಾರರಾಗಿದ್ದಾರೆ.
ಆಕ್ಸಿಬ್ಲೂ ಖನಿಜಯುಕ್ತ ನೀರು ಮತ್ತು ಆಕ್ಸಿಬ್ಲೂ ಜೂಸು ಉತ್ಪನ್ನಗಳ ಪ್ರಚಾರದಲ್ಲಿ ಸರ್ವರೂ ಭಾಗೀದಾರರಾಗಿ ನಮ್ಮೂರಿನ ಉತ್ಪನ್ನಗಳ ಯಶಸ್ಸಿಗೆ ಶ್ರಮಿಸಬೇಕೆಂದು ಅವರು ಕರೆ ನೀಡಿದರು. ಪಾಲುದಾರರಾದ ಇಸ್ಮಾಯಿಲ್ ಕೋಟೆಕಾರ್,ವಿತರಕರಾದ ಬಾತಿಷ್ ಅಜ್ಜಿನಡ್ಕ,ಡಿ.ಎ.ಅಶ್ರಫ್ ದೇರಳಕಟ್ಟೆ ಭಾಗವಹಿಸಿದರು.
ಪ್ರೊಡಕ್ಷನ್ ಮ್ಯಾನೇಜರ್ ವಿನೋದ್,ಅಹ್ಮದ್ ಸಲ್ಮಿ,ಶಾಝ್ ಉಳ್ಳಾಲ ಅತಿಥಿಗಳನ್ನು ಸ್ವಾಗತಿಸಿದರು.
ಆಕ್ಸಿಬ್ಲೂ ಸಂಸ್ಥೆಯ ವ್ಯವಸ್ಥಾಪಕ ಡಿ.ಐ.ಅಬೂಬಕರ್ ಕೈರಂಗಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.