
ಉಡುಪಿ: ಅಲೆವೂರು ರಾಂಪುರ ಸರ್ಕಲ್ ದೃಪುತ್ವಿ ವಾಣಿಜ್ಯ ಸಂಕೀರ್ಣದಲ್ಲಿ ಶ್ರೀ ವೀರಭದ್ರ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ನೂತನ ಶಾಖೆಯನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಬೆಂಗಳೂರು ಇದರ ನಿರ್ದೇಶಕರಾದ ಎಸ್. ಕೆ. ಮಂಜುನಾಥ ಅವರು ಉದ್ಘಾಟಿಸಿದರು
ಬಳಿಕ ಮಾತನಾಡಿ ಸಹಕಾರಿ ಕ್ಷೇತ್ರವು ಈಗ ಜೀವನದ ಕ್ರಮವಾಗಿದೆ, ಇಂತಹ ಸಹಕಾರಿ ಸಂಘವು ಸಮಾಜಕ್ಕೆ ಆರ್ಥಿಕ ಶಕ್ತಿಯಾಗಿ ನಿಂತಾಗ ಸಮಾಜದಲ್ಲಿ ಒಳ್ಳೆಯ ಬೆಳವಣಿಗೆ ಕಂಡು ಸಹಕಾರಿ ಸಂಸ್ಥೆಗಳು ಉತ್ತಮ ರೀತಿಯಲ್ಲಿ ಮುನ್ನಡೆಯುತ್ತದೆ ಎಂದರು. ರಾಜ್ಯದಲ್ಲಿ 130 ಸಹಕಾರಿ ಸಂಸ್ಥೆಗಳಿದ್ದು ಶೇ. 90 ಸಾಲ ವಸೂಲಾತಿ ಆಗುತ್ತಿರುವುದರಿಂದ ಗ್ರಾಹಕರಲ್ಲಿ ಸಹಕಾರ ಸಂಸ್ಥೆಗಳಲ್ಲಿ ನಂಬಿಕೆ ಇನ್ನಷ್ಟು ಹೆಚ್ಚಾಗುವಂತಾಗಿದೆ ಎಂದರು.
ಪ್ರಥಮ ಶಾಖೆಯ ಸಮಾರಂಭವನ್ನು ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾದ ಅಧ್ಯಕ್ಷ ಜಯರಾಮ ಶೆಟ್ಟಿಗಾರ್ ದೀಪ ಬೆಳಗಿಸಿದರು ಶುಭ ಹಾರೈಸಿದರು, ಭದ್ರತಾ ಕೊಠಡಿಯನ್ನು ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ಅಧ್ಯಕ್ಷ ಭಾಸ್ಕರ್ ಕಾಮತ್, ಕಂಪ್ಯೂಟರ್ ವಿಭಾಗವನ್ನು ಮುಂಬಾಯಿ ಉದ್ಯಮಿ ಉಮೇಶ್ ಜಿ. ಶೆಟ್ಟಿ ಅಲೆವೂರು, ಪ್ರಥಮ ಠೇವಣಿ ಪತ್ರವನ್ನು ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾ ಅಂಚನ್ ವಿತರಿಸಿದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು ವೃತ್ತಿಪರ ನಿರ್ದೇಶಕರು ಬೋಳ ಸದಾಶಿವ ಶೆಟ್ಟಿ, ಶ್ರೀವೀರಭದ್ರ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಅಧ್ಯಕ್ಷ ಸುಕೇಶ್ ಶೆಟ್ಟಿಗಾರ್, ಅಲೆವೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ್ ಸೇರಿಗಾರ್, ಪಂಚಾಯತ್ ಸದಸ್ಯ ಯತೀಶ್ ಕುಮಾರ್, ಕಟ್ಟಡದ ಮಾಲಕ ನಿರಂಜನ ಕುಮಾರ್, ದ.ಕ. ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಓಂಪ್ರಕಾಶ್, ಪದ್ಮಶಾಲಿ ಕ್ರಿಯಾವೇದಿಕೆ, ಪರ್ಕಳ ವಲಯ ಅಧ್ಯಕ್ಷ ಪ್ರಮೋದ್ ಕುಮಾರ್, ಬೂದ ಶೆಟ್ಟಿಗಾರ್, ನಿದೇಶಕರಾದ ಅಶೋಕ್ ಶೆಟ್ಟಿಗಾರ್ ರಾಂಪುರ, ಶಾಖಾ ಪ್ರಬಂಧಕಿ ಕು.ಅಶ್ಬಿನಿ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಗಂಗಾಧರ ಶೆಟ್ಟಿಗಾರ್ ಸ್ವಾಗತಿಸಿದರೆ, ನಿದೇಶಕರಾದ ಬಿ.ಎಚ್ ಶೆಟ್ಟಿಗಾರ್ ಮತ್ತು ಜಯಲಕ್ಷ್ಮಿ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರತ್ನಾ ಎಸ್. ಶೆಟ್ಟಿ ವಂದಿಸಿದರು.