
ಕೋಲಾರ : ಉಜಿರೆಯಲ್ಲಿ ಎಂಜಿನಿಯರಿಂಗ್ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಕೋಲಾರದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನೆದಿದೆ.
ಇಂಜಿನಿಯರಿಂಗ್ ಕೊನೆ ಸೆಮಿಸ್ಟರ್ ನಲ್ಲಿ ಮೂರು ಸಬ್ಜೆಕ್ಟ್ ನಲ್ಲಿ ಫೇಲಾದ ಹತಾಶೆಯಲ್ಲಿ ಉಜಿರೆಯ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ದುಡುಕಿನ ನಿರ್ಧಾರಕ್ಕೆ ಮುಂದಾಗಿ ತನ್ನ ಬದುಕಿಗೆ ಅಂತ್ಯ ಹಾಡಿದ್ದಾಳೆ. ಕೋಲಾರ ನಗರದ ಗೌರಿಪೇಟೆ 3ನೇ ಕ್ರಾಸ್ನ ಎಂಜಿನಿಯರಿಂಗ್ ಕೊನೆ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದ ಅನುಶ್ರೀ ಮೃತಪಟ್ಟ ವಿದ್ಯಾರ್ಥಿನಿ . ಈಕೆ ಗೌರಿಪೇಟೆ ನಿವಾಸಿ ಉಪನ್ಯಾಸಕ ಗೋಪಿಕೃಷ್ಣರವರ ಇಬ್ಬರು ಮಕ್ಕಳ ಪೈಕಿ ಮೊದಲನೇಯವಳು.
ಅನುಶ್ರೀ ಉಜಿರೆಯ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೊನೆ ಸೆಮಿಸ್ಟರ್ ಇಂಜಿನಿಯರಿಂಗ್ ಪರೀಕ್ಷೆ ಬರೆದಿದ್ದಳು. ಎರಡು ದಿನಗಳ ಹಿಂದಷ್ಟೇ ಅದರ ರಿಸೆಲ್ಟ್ ಬಂದಿತ್ತು. ಅದರಲ್ಲಿ ಮೂರು ವಿಷಯದಲ್ಲಿ ಈಕೆ ಫೇಲ್ ಆಗಿದ್ದಳು. ರಿಸಲ್ಟ್ ಬಂದಾಗಿನಿಂದ ಆಕೆ ಸಾಕಷ್ಟು ಬೇಸರಗೊಂಡಿದ್ದಳು, ಇದನ್ನು ಗಮನಿಸಿದ ತಂದೆ ಅನುಶ್ರೀಗೆ ಸಾಕಷ್ಟು ಧೈರ್ಯ ಕೂಡ ಹೇಳಿದ್ದರು. ಆದರೆ ಅನುಶ್ರೀ ಇಂದು ಮುಂಜಾನೆ ದುಡುಕಿನ ನಿರ್ಧಾರವನ್ನು ತೆಗೆದುಕೊಂಡಿದ್ದಾಳೆ.