
ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ (ರಿ) ಇವರು ದಿನಾಂಕ 06-09-2021 ಮತ್ತು 07-09-2021 ರಂದು ಆಯೋಜಿಸಿರುವ ಕರ್ನಾಟಕ ರಾಜ್ಯ ಮಟ್ಟದ “ಹಿರಿಯರ ಮತ್ತು 23 ವರ್ಷ ವಯೋಮಿತಿಯ ಮಹಿಳೆಯರ ಹಾಗೂ ಪುರುಷರ ಕ್ರೀಡಾಕೂಟ ಇಂದು ದಿನಾಂಕ 06-09-2021 ರಂದು ಶಾಸಕರು, ಕರ್ನಾಟಕ ಸ್ಟೇಟ್ ಮೀಟ್ ಸಂಘಟನಾ ಸಮಿತಿ ಅಧ್ಯಕ್ಷರಾದ ಶ್ರೀ ಕೆ. ರಘುಪತಿ ಭಟ್ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀ ವಿ. ಸುನಿಲ್ ಕುಮಾರ್, ಮಾಹೆ ಮಣಿಪಾಲದ ಕುಲಪತಿಗಳಾದ ಎಂ.ಡಿ ವೆಂಕಟೇಶ್, ಉಪಕುಲಾಧಿಪತಿಗಳಾದ ಎಚ್. ಎಸ್ ಬಲ್ಲಾಲ್, ಸಿ.ಎಂ.ಡಿ, ಎನ್.ಇ.ಬಿ ಸ್ಪೋರ್ಟ್ಸ್ ಎಂಟರ್ಟೈನ್ಮೆಂಟ್ ನ ನಾಗರಾಜ್ ಅಡಿಗ, ಕರ್ನಾಟಕ ರಾಜ್ಯ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ (ರಿ) ನ ಕಾರ್ಯದರ್ಶಿಗಳಾದ ರಾಜವೇಲು, ರಾಷ್ಟ್ರೀಯ ಕ್ರೀಡಾಪಟು ಅಶ್ವಿನಿ, ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ (ರಿ) ಗೌರವಾಧ್ಯಕ್ಷರಾದ ಬಾಲಕೃಷ್ಣ ಹೆಗ್ಡೆ, ಅಧ್ಯಕ್ಷರಾದ ಡಾ. ಕೆಂಪರಾಜ್, ಕೋಶಾಧಿಕಾರಿಗಳಾದ ದೀಪಕ್ ರಾಮ್ ಬಾಯಾರಿ, ಕರ್ನಾಟಕ ಸ್ಟೇಟ್ ಮೀಟ್ ಸಂಘಟನಾ ಸಮಿತಿ ಕಾರ್ಯದರ್ಶಿಗಳಾದ ಮಹೇಶ್ ಠಾಕೂರ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.