
ಉಡುಪಿಯಲ್ಲಿ ದಿನಾಂಕ 06-09-2021 ಮತ್ತು 07-09-2021 ರಂದು ನೇಶನ್ ಫಸ್ಟ್ ತಂಡದ “ಫಿಟ್ ರಹೋ ಉಡುಪಿ” ಎಂಬ ಧ್ಯೇಯವಾಕ್ಯದೊಂದಿಗೆ ಆಯೋಜಿಸಿರುವ 2 ದಿನಗಳ “75 ಕೀ.ಮೀ. ಮ್ಯಾರಥಾನ್” ಓಟದ ದ್ವಿತೀಯ ದಿನವಾದ ಇಂದು ದಿನಾಂಕ 07-09-2021 ರಂದು ಮಲ್ಪೆ ಬೀಚ್ ಗಾಂಧಿ ಪ್ರತಿಮೆ ಬಳಿ ಶಿವ ಪಂಚಾಕ್ಷರಿ ಭಜನಾ ಮಂದಿರದ ಅಧ್ಯಕ್ಷರಾದ ವಿಕ್ರಮ್ ಶ್ರೀಯಾನ್, ಜ್ಞಾನ ಜ್ಯೋತಿ ಭಜನಾ ಮಂದಿರದ ಅಧ್ಯಕ್ಷರಾದ ವಿಜಯ ತಿಂಗಳಾಯ, ಹನುಮಾನ್ ವಿಠೋಭ ಭಜನಾ ಮಂದಿರದ ಅಧ್ಯಕ್ಷರಾದ ರವಿ ಕರ್ಕೇರ, ಪಂಡರಿನಾಥ ಭಕ್ತಿ ಉದಯ ಭಜನಾ ಮಂದಿರದ ಅಧ್ಯಕ್ಷರಾದ ಸುಭಾಸ್ ಸಾಲಿಯನ್, ರಾಮ ಭಜನಾ ಮಂದಿರದ ನಾಗೇಶ್ ಸಾಲ್ಯಾನ್ ಅವರೊಂದಿಗೆ ಶಾಸಕ ಶ್ರೀ ಕೆ. ರಘುಪತಿ ಭಟ್ ರವರು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಉಡುಪಿ ನಗರಸಭೆಯ ಉಪಾಧ್ಯಕ್ಷರಾದ ಲಕ್ಷ್ಮೀ ಮಂಜುನಾಥ ಕೊಳ, ನಗರ ಸಭೆಯ ನಾಮ ನಿರ್ದೇಶಿತ ಸದಸ್ಯರಾದ ವಿಜಯ್ ಕುಂದರ್, ನೇಶನ್ ಫಸ್ಟ್ ತಂಡದ ಮೇಜರ್ ಪ್ರಕಾಶ್ ರಾವ್ ಹಾಗೂ ಸೂರಜ್ ಕಿದಿಯೂರು ಮತ್ತು ಪ್ರಮುಖರು ಉಪಸ್ಥಿತರಿದ್ದರು.