ಅಂತಾರಾಷ್ಟ್ರೀಯ
Trending

ಮೃತಪಟ್ಟ ಫುಟ್ಬಾಲ್ ಆಟಗಾರನಿಗೆ ಹೃದಯಸ್ಪರ್ಶಿ ವಿದಾಯ !

ಮೆಕ್ಸಿಕೋ:ಫುಟ್ ಬಾಲ್ ತಂಡವೊಂದು ಮೃತಪಟ್ಟ ತಂಡದ ಸದಸ್ಯನಿಗೆ ವಿದಾಯವನ್ನು ವಿಶೇಷ ರೀತಿಯಲ್ಲಿ ರೂಪಿಸಿದ ವಿಡಿಯೋವೊಂದು ವೈರಲ್ ಆಗಿದೆ. 16 ವರ್ಷದ ಬಾಲಕ ಮೆಕ್ಸಿಕೋದಲ್ಲಿ ಪೊಲೀಸರ ಗುಂಡಿಗೆ ಆಕಸ್ಮಿಕವಾಗಿ ಬಲಿಯಾಗಿದ್ದ. ಆತನ ಫುಟ್ಬಾಲ್ ಟೀಮ್​ಮೇಟ್ಸ್​ ಪ್ರತಿದಿನ ಆತ ಫುಟ್​ಬಾಲ್​ ಆಡುತ್ತಿದ್ದ ಸ್ಥಳಕ್ಕೆ ಮೃತದೇಹವನ್ನು ಕೊಂಡೊಯ್ದು, ಆತ ಕೊನೆಯ ಗೋಲು ಹೊಡೆಯುವಂತೆ ಮಾಡಿ ಅಂತಿಮ ವಿದಾಯ ನೀಡಿದರು.

54 ಸೆಕೆಂಡಿನ ವಿಡಿಯೋದಲ್ಲಿ ಫುಟ್​ಬಾಲ್​ ಕೋರ್ಟ್​ನಲ್ಲಿ ಸ್ನೇಹಿತನ ಮೃತದೇಹ ಇರುವ ಪೆಟ್ಟಿಗೆ ಇಟ್ಟಿರುತ್ತಾರೆ. ತಂಡದ ಒಬ್ಬ ಸದಸ್ಯ ಬಾಲ್​ ಅನ್ನು ಮತ್ತೋರ್ವನಿಗೆ ಪಾಸ್​ ಮಾಡಿದಾಗ ಆತನ ಚೆಂಡನ್ನು ಕೆಫಿನ್​ ಕಡೆಗೆ ಒದೆಯುತ್ತಾನೆ. ಕೆಫಿನ್​ಗೆ ತಾಗಿದ ಬಾಲ್​ ಸೀದ ಗೋಲಿನೊಳಗೆ ಹೋಗುತ್ತದೆ. ಬಳಿಕ ಎಲ್ಲರೂ ಕೆಫಿನ್​ ಅನ್ನು ತಬ್ಬಿಕೊಂಡು ಅಗಲಿದ ಟೀಮ್​ಮೇಟ್​ಗೆ ಕಂಬನಿ ಮಿಡಿಯುತ್ತಾರೆ. ಈ ವೇಳೆ ಅಲ್ಲಿ ಸೇರಿದ್ದ ಗುಂಪು ಚಿಯರ್​ ಮಾಡಿರುವುದನ್ನು ಹಿನ್ನೆಲೆ ಧ್ವನಿಯಲ್ಲಿ ಕೇಳಬಹುದಾಗಿದೆ.

 

 

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker