ಕರಾವಳಿ
Trending

ಅಕ್ರಮ ಮರಳು ದಂಧೆಗೆ ಸಂಬಂಧಿಸಿದ ‌ಎಲ್ಲರನ್ನೂ ಬಂಧಿಸಿ ಮಂಪರು ಪರೀಕ್ಷೆ ನಡೆಸಿ : ಅಮೃತ್ ಶೆಣೈ

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ‌ಉಪಾಧ್ಯಕ್ಷ ಅಮೃತ್ ಶೆಣೈಯವರ ನೇತೃತ್ವದಲ್ಲಿ ಪಕ್ಷದ ನಿಯೋಗ ಗೃಹ ಸಚಿವ ಹಾಗೂ ಉಡುಪಿ‌ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿತು.

ಉಡುಪಿ ಸ್ವರ್ಣಾ ನದಿಯಲ್ಲಿ ಹೂಳೆತ್ತುವ ನೆಪದಲ್ಲಿ ಅವ್ಯಾಹತವಾಗಿ ಮರಳನ್ನು ಅಕ್ರಮವಾಗಿ ಸಾಗಾಟ ಮಾಡಿದ್ದಾರೆ ಎಂದು ಆರೋಪಿಸಿ ಇತ್ತೀಚೆಗೆ ಸರಕಾರ ಸ್ಥಳಕ್ಕೆ ರೈಡ್ ಮಾಡಿ‌ ಕೆಲವು ವಾಹನಗಳನ್ನು ವಶ ,ಸಂಗ್ರಹಿಸಿದ ಮರಳನ್ನು ವಶ ಪಡಿಸಿಕೊಂಡು ಕೆಲವು ಜನರ ಮೇಲೆ ಪ್ರಕರಣ ದಾಖಲಿಸಿತ್ತು ,ಉಡುಪಿ ಜಿಲ್ಲಾಧಿಕಾರಿ ಯವರು ತದನಂತರ ಕೊಟ್ಟ ಹೇಳಿಕೆಯಲ್ಲಿ ಕೆಲವು ಅಧಿಕಾರಿಗಳನ್ನು ಅಮಾನತು ಮಾಡುವಂತೆ ಶಿಫಾರಸು ಮಾಡಲಾಗಿತ್ತು ಎನ್ನಲಾಗಿತ್ತು

ಕರಾಸ ಪಕ್ಷ ಸಚಿವರಲ್ಲಿ ಅಮಾನತು ಮಾಡಿದರೆ ಸಾಲದು ,ಸಂಬಂಧಿಸಿದ ‌ಎಲ್ಲರನ್ನೂ ಬಂಧಿಸಿ ಮಂಪರು ಪರೀಕ್ಷೆ ನಡೆಸಿ ಪ್ರಕರಣದ ಸಮಗ್ರ ತನಿಖೆ ನಡೆಸಬೇಕೆಂದು ಮನವಿ ನೀಡಿತು

ಅಮೃತ್ ಶೆಣೈಯವರು ಸಚಿವರಲ್ಲಿ ಕಳೆದ ನಾಲ್ಕು ವರ್ಷಗಳಿಂದ ಉಡುಪಿ ಜಿಲ್ಲೆಯ ಜನ ಮರಳಿನ ಅಭಾವದಿಂದ ನಷ್ಟಕ್ಕೊಳಪಟ್ಟಿದ್ದಾರೆ ಎಂಬ ವುಚಾರವನ್ನೂ ಇದೇ ಸಂದರ್ಭದಲ್ಲಿ ತಿಳಿಸಿದರು

ನಿಯೋಗದಲ್ಲಿ ಪ್ರಸಾದ ಕರ್ಕಡ, ಶಾಹಿದ ಅಲಿ, ಯಜ್ಞೇಶ ಆಚಾರ್ಯ, ರಾಮದಾಸ ಪೈ, ಪ್ರಿತೀಶ ಕುಮಾರ್, ಸಲ್ಮಾನ್ ಅಹ್ಮದ್, ದಿನೇಶರಾಮ, ಶ್ರೇಯಸ್ ಪೂಜಾರಿ, ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker