ರಾಷ್ಟ್ರೀಯ

ಸೆ.15 ರೊಳಗೆ ಒಂದು ರೂ. ದಂಡ ಕಟ್ಟದಿದ್ದರೆ ಪ್ರಶಾಂತ್ ಭೂಷಣ್ ಗೆ ಜೈಲು

ನವದೆಹಲಿ : ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ಒಂದು ರೂಪಾಯಿ ದಂಡ ವಿಧಿಸಲಾಗಿದೆ.

ಈ ದಂಡವನ್ನು ಪಾವತಿಸಲು ಸೆಪ್ಟೆಂಬರ್ 15 ರವರೆಗೆ ಕಾಲಾವಕಾಶ ನೀಡಲಾಗಿದ್ದು, ಒಂದು ವೇಳೆ ನಿಗದಿತ ಅವಧಿಯೊಳಗೆ ದಂಡ ಪಾವತಿಸದಿದ್ದರೆ ಮೂರು ತಿಂಗಳು ಜೈಲು ಅಥವಾ ಮೂರು ವರ್ಷಗಳ ಕಾಲ ವಕೀಲರಾಗಿ ಕಾರ್ಯ ನಿರ್ವಹಿಸದಂತೆ ನಿಷೇಧ ಹೇರಲಾಗುತ್ತದೆ.

ಈ ಮೊದಲು ವಿಚಾರಣೆ ನಡೆಸಿದ್ದ ನ್ಯಾಯಾಲಯ ಕ್ಷಮೆ ಕೋರಿದರೆ ನ್ಯಾಯಾಂಗ ನಿಂದನೆ ಪ್ರಕರಣ ವನ್ನು ಕೈಬಿಡುವುದಾಗಿ ಹೇಳಿದ್ದು, ಆದರೆ ಪ್ರಶಾಂತ್ ಭೂಷಣ್ ಇದಕ್ಕೆ ನಿರಾಕರಿಸಿದ್ದರು. ತಾವು ಜೈಲಿಗೆ ಹೋಗಲೂ ಸಿದ್ಧ ಎಂದು ಹೇಳಿದ್ದರು.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker