
ಕಳೆದ ಹತ್ತು ವರ್ಷಗಳಿಂದ ಜಿ .ಎಸ್. ಬಿ. ಸಮಾಜ ಹಿತರಕ್ಷಣಾ ವೇದಿಕೆ ಸಮಾಜ ಸಂಘಟನೆ ಮತ್ತು ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ.
ಜಿ. ಎಸ್. ಬಿ.ಸಮಾಜದ ಆರ್ಥಿಕವಾಗಿ ಹಿಂದುಳಿದ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕಳೆದ ಆರು ವರ್ಷಗಳಿಂದ ವಿದ್ಯಾಪೋಷಕ ನಿಧಿ ವಿದ್ಯಾರ್ಥಿವೇತನ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ.
2021-22 ನೇ ಸಾಲಿನ “ವಿದ್ಯಾಪೋಷಕ ನಿಧಿ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ”ವು ಮಂಗಳೂರಿನ ಕೋಡಿಯಾಲ್ ಬೈಲ್ ನಲ್ಲಿರುವ “ನಮ್ಮ ಕುಡ್ಲ” ಸ್ಟುಡಿಯೋದಲ್ಲಿ ಜುಲೈ 25 ,ಆದಿತ್ಯವಾರ ಅಪರಾಹ್ನ ಗಂಟೆ 12:00 ರಿಂದ 1.30 ವರೆಗೆ ನಡೆಯಲಿರುವುದು.
ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದ ಉದ್ಘಾಟನೆಯನ್ನು ಅಮೇರಿಕಾದ ವಾಷಿಂಗ್ಟನ್ ಡಿಸಿ ಯ ಐಸಿಎಐ ಚಾಪ್ಟರ್ ಅಧ್ಯಕ್ಷರಾದ ಸಿಎ ಗೋಕುಲ್ ದಾಸ್ ಪೈಯವರು ನೆರವೇರಿಸಲಿರುವರು.
ಅಧ್ಯಕ್ಷತೆಯನ್ನು ಕೆನರಾ ಬ್ಯಾಂಕಿನ ಜನರಲ್ ಮ್ಯಾನೇಜರ್ ಮತ್ತು ಕೆನರಾ ಬ್ಯಾಂಕ್ ಸರ್ಕಲ್ ಆಫೀಸ್ ಮಂಗಳೂರಿನ ಮುಖ್ಯಸ್ಥರಾದ ಶ್ರೀ . ಬಿ. ಯೋಗೇಶ್ ಆಚಾರ್ಯರವರು ವಹಿಸಲಿರುವರು.
ಈ ವರ್ಷ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ130 ಮಂದಿ ಅರ್ಹ ಜಿ. ಎಸ್. ಬಿ ವಿದ್ಯಾರ್ಥಿಗಳಿಗೆ ವಿದ್ಯಾಪೋಷಕ ನಿಧಿ ವಿದ್ಯಾರ್ಥಿ ವೇತನ ವಿತರಣೆ ಯಾಗಲಿದ್ದು,
ಸಮಾರಂಭದಲ್ಲಿ ಸಾಂಕೇತಿಕವಾಗಿ 10 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿತರಿಸಲಾಗುವುದು.
ಸಮಾರಂಭವನ್ನು “ನಮ್ಮ ಕುಡ್ಲ ಲೈವ್ಚಾನೆಲ್ನ” ಫೇಸ್ಬುಕ್ ಮತ್ತು ಯೂಟ್ಯೂಬ್ ನಲ್ಲಿಯೂ ಕೂಡ ವೀಕ್ಷಿಸಬಹುದು.
ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ 600/600 ಫಲಿತಾಂಶ ಪಡೆದ ಸಾಧಕ ಜಿ. ಎಸ್. ಬಿ. ವಿದ್ಯಾರ್ಥಿಗಳಿಗೆ ವಿಶೇಷ ಪುರಸ್ಕಾರ ಮಾಡಲಾಗುವುದು.
ಸಾಧಕ ವಿದ್ಯಾರ್ಥಿಗಳು ತಮ್ಮ ಹೆಸರು ,ವಿಳಾಸ, ಮೊಬೈಲ್ ಸಂಖ್ಯೆ, ಅಂಕಪಟ್ಟಿ ಪ್ರತಿ ಹಾಗೂ ಅವರ ವಿದ್ಯಾಸಂಸ್ಥೆಯ ವಿವರಗಳನ್ನು ಕಾರ್ಯಕ್ರಮದ ಸಂಯೋಜಕರಾದ ಮಂಗಳೂರಿನ ಶ್ರೀ ಪಿ. ಸುರೇಶ ಶೆಣೈ ಯವರ ವಾಟ್ಸಪ್ ನಂಬರ್ 9740918790 ಗೆ ಕಳುಹಿಸಿಕೊಡಬೇಕು
ಎಂದು ವಿದ್ಯಾಪೋಷಕ ವಿದ್ಯಾರ್ಥಿ ವೇತನ ನಿಧಿಯ ಅಧ್ಯಕ್ಷರಾದ ಶ್ರೀ ಸಿ.ಎ. ಎಸ್. ಎಸ್ .ನಾಯಕ್, ಜಿ. ಎಸ್. ಬಿ.ಸಮಾಜ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಜಿ .ಸತೀಶ ಹೆಗಡೆ, ಸಂಚಾಲಕರಾದ ಶ್ರೀ ಆರ್. ವಿವೇಕಾನಂದ ಶೆಣೈ ಮತ್ತು ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ರವರು ತಿಳಿಸಿರುತ್ತಾರೆ.