ಕರಾವಳಿ

ಡಯನಾ ವಿಠಲ್ ಪೈ ನೇತ್ರತ್ವದ ಲಯನ್ಸ್ ಕ್ಲಬ್ ಉಡುಪಿಯ ಪದಪ್ರಧಾನ ಸಮಾರಂಭ

ಉಡುಪಿ: ಲಯನ್ಸ್ ಸಂಸ್ಥೆಯು ಸಾರ್ವಜನಿಕ ಸಂಪರ್ಕ, ಸಮಾಜ ಸೇವೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ವಿಪುಲ ಅವಕಾಶ ಕಲ್ಪಿಸುತ್ತದೆ ಎಂದು ಮಾಜಿ ಲಯನ್ಸ್ ಜಿಲ್ಲಾ ಗವರ್ನರ್ ಮತ್ತು ಲಯನ್ಸ್ ಜಿಲ್ಲೆ 317 ಸಿಯ ಮೆಂಟರ್ ಜಯಕರ್ ಶೆಟ್ಟಿ ಇಂದ್ರಾಳಿ ಹೇಳಿದ್ದಾರೆ.

ಪ್ರತಿಷ್ಠಿತ ಲಯನ್ಸ್ ಕ್ಲಬ್ ಉಡುಪಿಯ ನೂತನ ಅಧ್ಯಕ್ಷ ಡಯನಾ‌ ಎಂ.ವಿಠಲ್ ಪೈ, ಕಾರ್ಯದರ್ಶಿಯಾಗಿ ಪಿ. ವಿಷ್ಣುದಾಸ್ ಪಾಟೀಲ್, ಕೋಶಾಧಿಕಾರಿಯಾಗಿ ಶ್ರೀಧರ ಭಟ್ ಮತ್ತವರ ತಂಡದ ಪದಪ್ರಧಾನ ಸಮಾರಂಭದಲ್ಲಿ ಪದಗ್ರಹಣ ಅಧಿಕಾರಿಯಾಗಿ ಮಾತನಾಡಿದರು.

ನೂತನ ಸದಸ್ಯರಾಗಿ‌ ಸೇರ್ಪಡೆಗೊಂಡ ಅತುಲ್ ಎಂ. ಭಕ್ತ, ಅಬ್ದುಲ್ ಇಲಿಯಾಸ್ ಮತ್ತು ರಾಮದಾಸ್ ಪ್ರಭುಗೆ ಜಯಕರ್ ಶೆಟ್ಟಿ‌ ಇಂದ್ರಾಳಿ ಪ್ರತಿಜ್ಞಾ ವಿಧಿ ಬೋಧಿಸಿದರು.

ನೂತನ ಅಧ್ಯಕ್ಷ ಡಯನಾ ಎಂ. ವಿಠಲ್ ಪೈ ಮಾತನಾಡಿ ತಮ್ಮ ಅಧಿಕಾರಾವಧಿಯಲ್ಲಿ ಹಮ್ಮಿಕೊಳ್ಳಲಿರುವ ಪರಿಸರಸಹ್ಯ ಹಾಗೂ ಜನೋಪಯೋಗಿ ಕಾರ್ಯಕ್ರಮಗಳ ವಿವರ ನೀಡಿದರು. ಈ ವೇಳೆ ಲಯನಿಸಂ‌ನಲ್ಲಿ ಸಲ್ಲಿಸಿದ ಸುದೀರ್ಘ ಸೇವೆಗಾಗಿ‌ ಜಯಕರ್ ಶೆಟ್ಟಿ ಇಂದ್ರಾಳಿಯನ್ನು ಲಯನ್ಸ್ ಕ್ಲಬ್ ಉಡುಪಿ ವತಿಯಿಂದ ಸನ್ಮನಿಸಲಾಯಿತು.

ಮಾಜಿ ಜಿಲ್ಲಾ ಗವರ್ನರ್ ಡಾ. ಎ. ರವೀಂದ್ರನಾಥ್ ಶೆಟ್ಟಿ ವಜ್ರ ಮಹೋತ್ಸವ ಯೋಜನೆಗಳ‌ ಯಶಸ್ಸಿಗೆ ಕಾರಣರಾದ ಪದಾಧಿಕಾರಿಗಳ ಶ್ರಮವನ್ನು ಕೊಂಡಾಡಿದರು. ಈ ವೇಳೆ ವಿಠಲ ಪೈ ಅವರು ಲಯನ್ಸ್ ಕ್ಲಬ್ ಉಡುಪಿಯ ವಜ್ರ ಮಹೋತ್ಸವ ಸಮಿತಿ ಅಧ್ಯಕ್ಷ ಪ್ರಸಾದ್ ಶೆಟ್ಟಿ ವರ್ವಾಡಿ, ಕಾರ್ಯಾಧ್ಯಕ್ಷ ರಾಜಗೋಪಾಲ್ ಎಸ್. ಕಾರ್ಯದರ್ಶಿ ಎ. ದಿನೇಶ್ ಕಿಣಿ ಮತ್ತು ಕೋಶಾಧಿಕಾರಿ ಲೂಯಿಸ್ ಲೋಬೊರನ್ನು ಸನ್ಮಾನಿಸಿದರು.

ಲಿಯೊ ಕ್ಲಬ್ ಅಧ್ಯಕ್ಷ ಭುವನ್ ಸಂಕೊಳ್ಳಿ, ಕಾರ್ಯದರ್ಶಿ ಅಭಿನವ್ ಕಿಣಿ, ಕೋಶಾಧಿಕಾರಿ ಜೇಸನ್ ಫೆರ್ನಾಂಡೀಸ್, ಲಯನ್ ಲೇಡಿ ಕೌನ್ಸಿಲ್‌ನ ಅಧ್ಯಕ್ಷೆ ಮಾಯಾ ಪೈ, ಕಾರ್ಯದರ್ಶಿ ಅಲ್ಕಾ ಕಾಮತ್ ಪದಪ್ರಧಾನ ಸಮಾರಂಭವೂ ಇದೇ ವೇಳೆ ನಡೆಯಿತು. ನಿರ್ಗಮನ ಅಧ್ಯಕ್ಷ ಪ್ರಸಾದ್ ಶೆಟ್ಟಿ ವರ್ವಾಡಿ ಸ್ವಾಗತಿಸಿ, ತನ್ನ ಅಧಿಕಾರಾವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು. ಲಯನ್ಸ್ ಪ್ರಾಂಥೀಯ ಅಧ್ಯಕ್ಷ ಪಾಂಡುರಂಗ ಆಚಾರ್ ಶುಭಾಶಂಸನೆಗೈದರು.

ನಿರ್ಗಮನ ಕಾರ್ಯದರ್ಶಿ ‌ಅಲೆವೂರು ದಿನೇಶ್ ಕಿಣಿ ವಾರ್ಷಿಕ ಚಟುವಟಿಕೆಗಳ ವರದಿ ಮಂಡಿಸಿದರು. ಹರೀಶ್ ಕಿಣಿ ಪದಗ್ರಹಣ ಅಧಿಕಾರಿಯನ್ನು ಪರಿಚಯಿಸಿದರು. ಲಯನ್ ಲೇಡಿ ಕೌನ್ಸಿಲ್‌ನ ನಿರ್ಗಮನ ಅಧ್ಯಕ್ಷೆ ರೂಪಾ ಡಿ. ಕಿಣಿ, ಕಾರ್ಯದರ್ಶಿ ಚಂದ್ರಿಕಾ ರವೀಶ್, ಕೋಶಾಧಿಕಾರಿ ಮಮತಾ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿರುಪಮಾ ಪ್ರಸಾದ್ ಶೆಟ್ಟಿ ಪ್ರಾರ್ಥನೆ ಸಲ್ಲಿಸಿದರು.

ಲೆಕ್ಕ ಪರಿಶೋಧಕ ಅಜಿತ್ ಕುಮಾರ್ ಯು.ಬಿ. ಮತ್ತು ಹರೀಶ್ ಕಿಣಿ ಕಾರ್ಯಕ್ರಮ ನಿರೂಪಿಸಿ, ನೂತನ ಕಾರ್ಯದರ್ಶಿ‌ ಪಿ. ವಿಷ್ಣುದಾಸ್ ಪಾಟೀಲ್ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!