
ಬಾರಕೂರು ಉದಯ ಪೂಜಾರಿ ಯವರಿಂದ ಲಾಕ್ ಡೌನ್ ಅವಧಿಯಲ್ಲಿ ಯೂಟ್ಯೂಬ್ ನಲ್ಲಿ ಜಾಲಡಿ ಲಾಕ್ ಡೌನ ಸಡಿಲಿಕೆಯಲ್ಲಿ ತಯಾರಾಯಿತು ಹಸಿರು ಮೇವು ಕತ್ತರಿಸುವ ಯಂತ್ರ .
ಉದಯ ಪೂಜಾರಿಯವರ ತಮ್ಮ ಸುಮಾರು 50 ಸಣ್ಸ್ ಜಾಗದಲ್ಲಿ ಜೋಳದ ಗಿಡ ಬೆಳೆಸಿದ್ದರು ಲಾಕ ಡೌನ ಆದ ಕಾರಣ ಹಸಿರು ಮೇವು ಕತ್ತರಿಸುವ ಮೇಶಿನ್ ಎಲ್ಲಿಯೂ ಸಿಗಿತ್ತಿಲ್ಲ ಮತ್ತು ಆನ್ಲೈನ್ ನಲ್ಲಿ ಡಿಲೆವರಿ ಇಲ್ಲ ಮತ್ತು ಬಾರಿ ದುಬಾರಿ ಆದ ಕಾರಣ ಇವರೆ ಆದನ್ನು ತಯಾರಿಸಲು ಹೊರಟರು.

ಮೊದಲ ಪ್ರಯತ್ನ ದಲ್ಲಿ ಸೋಲು ಕಂಡರು ದ್ರತಿಗೆಡದ ಉದಯ ಪೂಜಾರಿಯವರು ಎರಡನೆ ಪ್ರಯತ್ನ ಅವರಿಗೆ ಗೆಲವು ತಂದು ಕೊಟ್ಟಿತು.ಈ ಮೊದಲು ಯೂ ಟ್ಯೂಬನಲ್ಲಿ Hyderphonic ಮೇವು ತಯಾರಿಸುವ ವಿಧಾನವನ್ನು ಅರಿತು ಅನ್ನ್ ಲೈನನಲ್ಲಿ ಸಾಮಗ್ರಿಗಳನ್ನು ತರಿಸಿಕೊಂಡು ಅದನ್ನು ತಯಾರಿಸುವಲ್ಲಿ ಯಶಸ್ವಿಯಾಗಿದರು.
ಹಸಿರು ಮೇವು ಕತ್ತರಿಸುವ ಮೇಶಿನ್ ಎಲ್ಲಿಯೂ ಸಿಗಿತ್ತಿಲ್ಲ ಮತ್ತು ಆನ್ಲೈನ್ ನಲ್ಲಿ ಡಿಲೆವರಿ ಇಲ್ಲ ಮತ್ತು ಬಾರಿ ದುಬಾರಿ ಆದ ಕಾರಣ ಇವರೆ ತಯಾರಿಸಿ ತಮ್ಮ ಸಹೋದರನ ಹೈನುಗಾರಿಕೆಗೆ ನೆರವಾಗಿದ್ದಾರೆ.ಇದಕ್ಕೆ ಹಳೆಯ ವಿದ್ಯುತ್ ಮೋಟಾರು ಅಳವಡಿಸಿ ಸುನೀಲ ಮತ್ತು ಪ್ರಶಾಂತ (ಕೋಟಿ ಚನ್ನಯ್ಯ ಇಂಜಿನಿಯರಿಂಗ್ ವರ್ಕ)ರವರ ಸಹಾಯದಿಂದ ಸಿದ್ದ ಪಡಿಸಿದ್ದಾರೆ.
ಇದಕ್ಕೆ ತಗಲಿದ ವೆಚ್ಚ ಬರೆ 7ಸಾವಿರ ರೂಪಾಯಿಗಳು.ಅದೆ ಹೊಸ ಮೋಟಾರು ಆಳವಡಿಸಿದರೆ ಸುಮಾರು 15 ಸಾವಿರದಲ್ಲಿ ರೆಡಿ ಆಗಬಹುದು ಅನ್ನುತ್ತಾರೆ.ಹೆಚ್ಚಿನ ಮಾಹಿತಿಗಾಗಿ ಉದಯ ಪೂಜಾರಿಯವರನ್ನು ಸಂಪರ್ಕಿಸ ಬಹುದು. ಸಂಪರ್ಕ ಸಂಖ್ಯೆ: 9108241082