ವಿಟ್ಲದಲ್ಲಿ ಹಿಟ್ ಅಂಡ್ ರನ್ ಪಾದಚಾರಿ ಮಹಿಳೆಗೆ ಬೈಕ್ ಡಿಕ್ಕಿ – ಸಿಸಿಟಿವಿಯಲ್ಲಿ ಗುರುತು ಪತ್ತೆ

ವಿಟ್ಲ: ಪಾದಚಾರಿ ಮಹಿಳೆಗೆ ಡಿಕ್ಕಿ ಹೊಡೆದ ಬೈಕ್ ಸವಾರ ಬಳಿಕ ಅಲ್ಲಿಂದ ಬೈಕ್ ಸಮೇತ ಪರಾರಿಯಾದ ಘಟನೆ ಪುತ್ತೂರು ತಾಲೂಕಿನ ವಿಟ್ಲದ ಖಾಸಗಿ ಬಸ್ಸು ನಿಲ್ದಾಣದಲ್ಲಿ ಜು.೨೦ ರಂದು ಬೆಳಿಗ್ಗೆ ಸಂಭವಿಸಿದೆ .
ಪುತ್ತೂರು ಕಡೆಯಿಂದ ಬಂದ ಬೈಕ್ ಖಾಸಗಿ ಬಸ್ಸು ನಿಲ್ದಾಣದ ಸಮೀಪ ನಡೆದು ಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮಹಿಳೆ ರಸ್ತೆಗೆಸೆಯಲ್ಪಟ್ಟಿದ್ದು,ಆಕೆಯ ತಲೆಗೆ ಗಂಭೀರ ಗಾಯಗೊಂಡಿದ್ದಾರೆ
ಬೈಕ್ ಸವಾರ ಮಂಗಳೂರು ರಸ್ತೆಯಲ್ಲಿ ಪರಾರಿಯಾಗಿದ್ದು ಇದನ್ನು ಸ್ಥಳದಲ್ಲಿದ್ದ ಜನರು ಗಮನಿಸಿ ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಅಲ್ಲದೇ ಅಪಘಾತದ ದೃಶ್ಯವೂ ಅಲ್ಲಿನ ಸಿಸಿ ಕ್ಯಾಮರದಲ್ಲೂ ಸೆರೆಯಾಗಿದೆ . ಇದರ ಆಧಾರದಲ್ಲಿ ಪೊಲೀಸರು ತನಿಖೆ ನಡೆಸುತಿದ್ದೂ ಬೈಕ್ ಸವಾರನ ಗುರುತು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೇ ಈವರೆಗೆ ಅಪಘಾತದ ಬಗ್ಗೆ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ
ಗಾಯಾಳು ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದಾರೆ. ಘಟನೆಯು ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ