
ಬಳ್ಳಾರಿ : ಆಂಧ್ರಪ್ರದೇಶದ ಆನಂದಯ್ಯ ಕೊರೋನಾ ಔಷಧಿಗೆ ಭಾರೀ ಬೇಡಿಕೆ ಇದೆ. ಈ ಔಷಧಿ ಮಾರಾಟಕ್ಕೆ ತಮಗೆ ಪೇಂಟೆಂಟ್ ಕೊಡುವಂತೆ ದೊಡ್ಡ ದೊಡ್ಡ ಕಂಪನಿಗಳು ಮುಗಿಬಿದ್ದರೂ, ಆನಂದಯ್ಯ ಮಾತ್ರ ನೀಡಿಲ್ಲ. ತಾವೇ ಜನರ ಸೇವೆಯ ಸಲುವಾಗಿ ಉಚಿತವಾಗಿ ಕೊರೋನಾ ಔಷಧಿಯನ್ನು ನೀಡುತ್ತಿದ್ದಾರೆ. ಇದೀಗ ಆಂಧ್ರದ ಆನಂದಯ್ಯ ಕೊರೋನಾ ಔಷಧ, ರಾಜ್ಯಕ್ಕೂ ಬಂದಿದೆ. ಮೊದಲ ಬಾರಿಗೆ ರಾಜ್ಯದಲ್ಲಿ ವಿತರಿಸೋದಕ್ಕೆ ಶುರುವಾಗಿದ್ದು, ಅದು ಎಲ್ಲಿ ಸಿಗಲಿದೆ ಎನ್ನುವ ಬಗ್ಗೆ ಮುಂದೆ ಓದಿ..
ಹೌದು.. ಆಂಧ್ರ ಪ್ರದೇಶದ ಆನಂದಯ್ಯ ಕೊರೋನಾ ಔಷಧಿ, ರಾಜ್ಯಕ್ಕೂ ಬಂದಿದೆ. ಈಗಾಗಲೇ ಸುಮಾರು 12 ಸಾವಿರಕ್ಕೂ ಹೆಚ್ಚು ಜನರಿಗೆ ಟ್ರಯಲ್ ಮಾದರಿಯಲ್ಲಿ ಔಷಧಿ ವಿತರಣೆಯಾಗಿದ್ದು, ಕೊರೋನಾ ಸೋಂಕಿನ ವಿರುದ್ಧದ ರಾಮ ಬಾಣದ ಔಷಧ ಎನ್ನಲಾಗುತ್ತಿದೆ. ಇದೇ ಔಷಧಿಗೆ ಆಂಧ್ರ ಪ್ರದೇಶದ ಆಯುಷ್ ಇಲಾಖೆ ಕೂಡ ಅನುಮೋದನೆ ನೀಡಿದೆ.
ಇದೀಗ ರಾಜ್ಯದಲ್ಲಿ ಆನಂದಯ್ಯ ಔಷಧಿಯನ್ನು ವಿತರಿಸಲು ಅನುಮತಿ ಕೋರಿ ಹಂಪಿಯ ಶ್ರೀ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ. ಈಗಾಗಲೇ ಟ್ರಯಲ್ ಮಾದರಿಯಲ್ಲಿ ಬಳ್ಳಾರಿ, ಹಂಪಿ, ಕಮಲಾಪುರ ಹಾಗೂ ಆನೆಗುಂದಿ ಸೇರಿದಂತೆ ಬಳ್ಳಾರಿ, ಕೊಪ್ಪಳ ಜಿಲ್ಲೆಯಲ್ಲಿ ಔಷಧಿ ವಿತರಣೆ ಕೂಡ ಮಾಡಲಾಗಿದೆ.
ಈಗ ಅಧಿಕೃತವಾಗಿ ಆನಂದಯ್ಯ ಔಷಧಿ ವಿತರಣೆಗೆ ಸಿಎಂಗೆ ಪತ್ರ ಬರೆಯಲಾಗಿದ್ದು, ಒಂದು ವೇಳೆ ಸಿಎಂ ಯಡಿಯೂರಪ್ಪ ಅನುಮತಿಸಿದ್ರೇ.. ರಾಜ್ಯದಲ್ಲೂ ಆನಂದಯ್ಯ ಕೊರೋನಾ ಔಷಧಿ ವಿತರಣೆ ಅಧಿಕೃತವಾಗಿ ಆರಂಭಗೊಳ್ಳಲಿದೆ. ಈ ಮೂಲಕ ಹಂಪಿಯ ಶ್ರೀ ಗೋವಿಂದಾನಂದ ಸರಸ್ವತಿ ಸ್ವಾಮೀಜಿಯವರಿಗೆ ಆನಂದಯ್ಯ ಕೊರೋನಾ ಔಷಧಿಯ ವಿತರಣೆ ಆರಂಭವಾಗಲಿದೆ.