10ನೇ ತರಗತಿ ಪಠ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಪಠ್ಯ ಮರು ಸೇರ್ಪಡೆ ಬರೇ ಆದೇಶ ಮಾತ್ರವೇ,ಅನುಷ್ಠಾನ ಇಲ್ಲವೇ..?

ಈ ವರ್ಷ ರಾಜ್ಯದಲ್ಲಿ ಹೆಚ್ಚು ಸುದ್ದಿ ಮಾಡಿದ್ದು ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ. ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಹಲವು ನಾಯಕರ ಪಠ್ಯಗಳನ್ನು ಕೈ ಬಿಟ್ಟಿದ್ದು, ಮತ್ತು ಹಲವು ನಾಯಕರ ಪಠ್ಯ ಸೇರ್ಪಡೆ ಮಾಡಿದ್ದು, ಕೆಲವು ವಿಷಯಗಳನ್ನು ತಿದ್ದುಪಡಿ ಮಾಡಿರುವ ಕುರಿತು ವಿವಾದಗಳು ಬುಗಿಲೆದ್ದಿದ್ದವು. ಅದರಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಪಠ್ಯವು ಕೂಡಾ ಹೌದು.
ಶಾಲಾ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಅನಾವಶ್ಯಕವಾಗಿ ನಾರಾಯಣ ಗುರುಗಳ ಸಮಾಜಸುಧಾರಣೆಯ ಚಿಂತನೆಯನ್ನು ಕೈಬಿಟ್ಟಾಗ ತೀವ್ರ ವಿರೋಧ ವ್ಯಕ್ತವಾಯಿತು ಈ ಬೆನ್ನಲ್ಲೇ ಬ್ರಹ್ಮಶ್ರೀ ನಾರಾಯಣ ಗುರು ಪಠ್ಯವನ್ನು ಈ ಹಿಂದಿನಂತೆಯೆ ಸಮಾಜ ವಿಜ್ಞಾನ ಪಠ್ಯದಲ್ಲಿ ಅಳವಡಿಸುವ ಕುರಿತು ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಆದರೆ ಈ ಆದೇಶದ ಅನುಪಾಲನೆ ಹೈಸ್ಕೂಲಿನಲ್ಲಿ ಆಗದೇ ಇರುವುದು ಬೇಸರದ ಸಂಗತಿ.
ಜಿಲ್ಲೆ,ತಾಲೂಕು ಮಟ್ಟದ ಶಿಕ್ಷಣಾಧಿಕಾರಿಗಳು ಈ ಕುರಿತು ಸ್ಥಳೀಯ ಶಾಲೆಗಳಲ್ಲಿ ನಾರಾಯಣ ಗುರು ಪಠ್ಯ ಬೋಧನೆಯಾಗುವಲ್ಲಿ ಕ್ರಮವಹಿಸದಿರುವುದನ್ನು ಗಮನಿಸಿದಾಗ ಸರ್ಕಾರದ ನಡವಳಿಕೆ ಕುರಿತು ಅನುಮಾನ ಮೂಡುತ್ತಿದೆ.
ಅಂದಿನ ಪ್ರತಿಭಟನೆ, ವಿರೋಧದ ಕಾರಣಕ್ಕೆ ಕೇವಲವಾಗಿ ಆದೇಶ ಪ್ರಕಟಣೆಯಾಯ್ತಾ, ಅದು ಪಾಲನೆಯಾಗುವುದು ಯಾಕೆ ಸಾಧ್ಯವಾಗಿಲ್ಲ ಎಂದು ಸಂಬಂಧಪಟ್ಟವರು ಸ್ಪಷ್ಟಪಡಿಸಬೇಕು.
ನಾರಾಯಣ ಗುರು ಅನುಯಾಯಿಗಳು ಹಾಗೂ ಬಿಲ್ಲವ ಸಂಘಟನೆಗಳು ಈ ರೀತಿಯ ಬೆಳವಣಿಗೆಗಳ ಕುರಿತು ಜಾಗೃತಿಗೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ. ಪ್ರವೀಣ್ ಎಂ ಪೂಜಾರಿ ಅಧ್ಯಕ್ಷರು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.