
ಜಗತ್ತಿಗೆ ಮಹಾಮಾರಿಯಾದ ಕೊರೊನ ಬಗ್ಗೆ ಅನುಮಾನಾಸ್ಪದ ಘಟನೆಗಳು ಎಲ್ಲೆಡೆ ಕಂಡುಬರುತ್ತಿದೆ.ಇದಕ್ಕೆ ಪೂರಕವೆಂಬಂತೆ ಮೊನ್ನೆ ನಮ್ಮ ಜಿಲ್ಲೆಯ ಅಲೆವೂರು ಎಂಬ ಗ್ರಾಮದಲ್ಲಿ ಮೃತಪಟ್ಟ ಯುವತಿಯ ಸಂಶಯಾಸ್ಪದ ಸಾವು ಮತ್ತು ಅನಂತರ ಬಂದ ಕೊರೊನ ಪಾಸಿಟಿವ್ ವರದಿ ಈ ಎಲ್ಲಾ ಅನುಮಾನಗಳಿಗೆ ಸಾಕ್ಷಿ ಎಂಬಂತಿದೆ.*
*ಕೊರೊನ ಹೆಸರಿನಿಂದ ಕೆಲವು ಖಾಸಗಿ ಆಸ್ಪತ್ರೆಗಳು, ಸರಕಾರದ ಅಧಿಕಾರಿಗಳು ಅದೇ ರೀತಿ ಕೆಲವೊಂದು ರಾಜಕೀಯ ವ್ಯಕ್ತಿಗಳು ಅಮಾಯಕ ಜನರಿಂದ ಸುಲಿಗೆ ಮಾಡುತ್ತಿರುವ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವುದನ್ನು ಗಮನಿಸುವಾಗ ಇದರಲ್ಲಿ ಏನೋ ಒಂದು ಬಹುದೊಡ್ಡ ಹಗರಣ ನಡೆಯುತ್ತಿರುವಂತಿದೆ.*
*ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಸಾಮಾಜಿಕ ಕಳಕಳಿಯುಳ್ಳ ಒಂದು ರಾಜಕೀಯ ರಹಿತ ಸಂಘಟನೆಯಾಗಿದ್ದು ಜಿಲ್ಲೆಯ ಸಮಸ್ತ ನಾಗರಿಕರ ಹಿತದೃಷ್ಟಿಯಿಂದ, ಜಿಲ್ಲಾಡಳಿತ ಮತ್ತು ಸರಕಾರ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಮತ್ತು ಸತ್ಯಾಸತ್ಯತೆಯನ್ನು ಜನರಿಗೆ ತಿಳಿಯಪಡಿಸಬೇಕೆಂದು ಸ್ಪಷ್ಟಪಡಿಸುತ್ತಾ , ಜನಸಾಮಾನ್ಯರ ನ್ಯಾಯದ ಪರವಾಗಿ ನಮ್ಮ ವೇದಿಕೆ ಸದಾ ಬದ್ದವಾಗಿದೆ ಎಂದು ತಿಳಿಯಪಡಿಸುತ್ತೇವೆ*
ಪ್ರವೀಣ್ ಎಮ್.ಪೂಜಾರಿ
ಜಿಲ್ಲಾ ಅಧ್ಯಕ್ಷರು
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ(ರಿ)