ಉಡುಪಿ ನ್ಯೂಸ್ನಲ್ಲಿ ಪ್ರಕಟಗೊಂಡ ಗೌರೀಶ ಶಾಸ್ತ್ರಿಯವರು ಬರೆದ ಲೇಖನ ಸಂಗತಿಗಳನ್ನು ಕಾರ್ಯರೂಪಕ್ಕೆ ತರುವುದಾಗಿ ಮುಖ್ಯಮಂತ್ರಿಗಳ ಘೋಷಣೆ !

ಉಡುಪಿ ನ್ಯೂಸ್ ವೆಬ್ ಸೈಟ್ ನಲ್ಲಿ ದೇಶದ ಆರ್ಥಿಕ ಸ್ಥಿತಿಯನ್ನು ಸರಿದೂಗಿಸಲು ಹಿರಿಯ ಪತ್ರಕರ್ತಗೌರೀಶ ಶಾಸ್ತ್ರಿಯವರು ಬರೆದ “ದೇಶದ ಆರ್ಥಿಕ ಉಳಿತಾಯ ಹೀಗೂ ಸಾಧ್ಯ ಅಲ್ಲವೇ ?” ಎನ್ನುವ ಲೇಖನ ಪ್ರಕಟಗೊಂಡು ಕೆಲವೇ ದಿನಗಳಲ್ಲಿ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಶಾಸ್ತ್ರಿಯವರು ಉಲ್ಲೇಖಿಸಿದ ಹಲವಾರು ಸಂಗತಿಗಳನ್ನು ಕಾರ್ಯರೂಪಕ್ಕೆ ತರುವುದಾಗಿ ಮುಖ್ಯಮಂತ್ರಿಗಳು ಘೋಷಿಸಿರುವುದು ಸಂತೋಷದ ವಿಷಯ. ಇದರಿಂದ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ 2000ಕೋಟಿ ರೂಪಾಯಿಗಳು ಉಳಿತಾಯ ಆಗುತ್ತದೆ !?

ಈ ವಿಷಯವಾಗಿ ಮೋದಿಯವರಿಗೆ ಇ ಮೇಲ್ ಕೂಡ ಮಾಡಿರುತ್ತಾರೆ. ಎಲ್ಲ ವಿಷಯಗಳು ದೇಶದಲ್ಲಿ ಕಾರ್ಯರೂಪಕ್ಕೆ ಬಂದಲ್ಲಿ ದೇಶದ ಖಜಾನೆಗೆ ಒಂದು ಲಕ್ಷ ಕೋಟಿ ರೂಪಾಯಿಗಳ ಕ್ಕಿಂತ ಜಾಸ್ತಿ ಹಣ ವಾರ್ಷಿಕ ಉಳಿತಾಯವಾಗಲಿದೆ !?
ಗೌರೀಶ ಶಾಸ್ತ್ರಿಯವರಿಗೆ ನಾವು ಈ ಮೂಲಕ ಅಭಿನಂದನೆಗಳನ್ನು ತಿಳಿಸುತ್ತಿದ್ದೇವೆ. ಅವರು ದೂರದೃಷ್ಟಿ ಇರುವ ಬರಹಗಾರರಾಗಿದ್ದರು ಎಲ್ಲಾ ಕ್ಷೇತ್ರದ ಬಗ್ಗೆ ಆಗಾಧವಾದ ಜ್ಞಾನವನ್ನು ಹೊಂದಿದ್ದಾರೆ. ಉಡುಪಿ ನ್ಯೂಸ್ ವೆಬ್ ಸೈಟಿಗೆ ಮಾರ್ಗದರ್ಶಕರಾಗಿ ಅವರ ಕೊಡುಗೆ ಅಪಾರ. ಧನ್ಯವಾದಗಳು ಸರ್ .
ಉಡುಪಿ ನ್ಯೂಸ್