
ಖಾಸಗಿ ಶಾಲೆಗಳು ಶುಲ್ಕ ಪಡೆಯಲು ಸರ್ಕಾರ ಅನುಮತಿ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರಧ್ವನಿ ವರದಿಯ ಬೆನ್ನಲ್ಲೇ ಇದೀಗ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಎಸ್.ಸುರೇಶ್ ಕುಮಾರ್ ಅವರು ಶಾಸಗಿ ಶಾಲೆಗಳಿ ಖಡಕ್ ವಾರ್ನಿಂಗ್ ನೀಡಿದ್ದಾರೆ.
“ಖಾಸಗಿ ಶಾಲೆಗಳ ಲಾಬಿಗೆ ಮಣಿಯಿತೆ ಸರ್ಕಾರ? | ಶಾಲಾ ಶುಲ್ಕ ಪಡೆಯಲು ಸರ್ಕಾರದ ಆದೇಶ” ಎಂಬ ಶೀರ್ಷಿಕೆಯಡಿಯಲ್ಲಿ, ಶೈಕ್ಷಣಿಕ ವರ್ಷ ಆರಂಭವಾಗದೆಯೇ ಸರ್ಕಾರ ಹೇಗೆ ಶುಲ್ಕ ಪಾವತಿಸಲು ಅನುಮತಿ ನೀಡಿದೆ ಎಂಬ ಪ್ರಶ್ನೆಗಳೊಂದಿಗೆ ಸೆ.6ರಂದು ವರದಿ ಮಾಡಿತ್ತು. ಇನ್ನು ಈ ಸಂಬಂಧ ಇಂದು ಶಿಕ್ಷಣ ಸಚಿವರು ಇಂದು ಉತ್ತರಿಸಿದ್ದಾರೆ.
ಸರ್ಕಾರವು ಒಂದು ಅವಧಿಯ ಶುಲ್ಕವನ್ನು ಮಾತ್ರವೇ ವಿದ್ಯಾರ್ಥಿಗಳಿಂದ ಪಡೆಯಬೇಕು ಎಂದು ಹೇಳಿದೆ. ಜೂನ್ ನಿಂದ ಶಾಲೆಗಳು ಪ್ರಾರಂಭವಾಗಿಲ್ಲ, ಹೀಗಾಗಿ ಅನೇಕ ಶಿಕ್ಷಕರು ತೊಂದರೆಯಲ್ಲಿದ್ದಾರೆ. ಹೀಗಾಗಿ ಮಕ್ಕಳ ದಾಖಲಾತಿಗೆ ಅವಕಾಶ ನೀಡಿ, ಒಂದು ಅವಧಿಯ ಅಧಿಕೃತ ಶುಲ್ಕವನ್ನು ಮಾತ್ರ ಪಡೆಯುಂತೆ ಸೂಚಿಸಿದ್ದೇವೆ.ಈ ಸಂಗ್ರಹಿಸಿದ ಶುಲ್ಕದಿಂದ ಶಿಕ್ಷಕರ ವೇತನ ಪಾವತಿ ಮಾಡಲು ಸೂಚನೆ ನೀಡಿದ್ದೇವೆ ಎಂದು ಅವರು ತಿಳಿಸಿದರು.
ಈ ಆದೇಶವನ್ನು ಬಳಸಿಕೊಂಡು ಹೆಚ್ಚಿನ ಶುಲ್ಕವನ್ನು ಪಡೆದರೆ ಅಂತಹ ಶಾಲೆಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಅವರು ಇದೇ ಸಂದರ್ಭ ಎಚ್ಚರಿಕೆ ನೀಡಿದರು.