
ಒಂದೇ ಕುಟುಂಬದ ಆರು ಮಂದಿ ಆತ್ಮಹತ್ಯೆಗೆ ಶರಣಾದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನ ಹಳ್ಳಿಯಲ್ಲಿ ನಡೆದಿದೆ.
ದಂಪತಿ ಮತ್ತು ನಾಲ್ವರು ಮಕ್ಕಳು ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆಗೈದಿದ್ದು, ಮೃತಪಟ್ಟವರನ್ನು ಪತಿ ಭಿಮರಾಯ ಸುರಪುರ(45), ಪತ್ನಿ ಶಾಂತಮ್ಮ(36), ಮಕ್ಕಳಾದ ಸುಮಿತ್ರಾ(12), ಶ್ರೀ ದೇವಿ(12), ಲಕ್ಷ್ಮಿ(8), ಶಿವರಾಜ(9) ಎಂದು ಗುರುತಿಸಲಾಗಿದೆ.
ಕುಟುಂಬ ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದ್ದು, ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಿಂದ ಇಡೀ ಗ್ರಾಮದ ಜನರು ಮಮ್ಮಲ ಮರುಗಿದ್ದು, ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.














