
ಉಡುಪಿ: ಗುಂಡಿಬೈಲು ದಿ. ಪುಂಡಲಿಕ್ ಭಟ್ ಇವರ ಪುತ್ರ ಭಟ್ ಕ್ಯಾಟರಿಂಗ್ ಮಾಲಕ ಎಚ್. ಸುಧೀರ್ ಭಟ್ (46) ತೀವ್ರ ಹೃದಯಾಘಾತದಿಂದ ಗುರುವಾರ ವಿಧಿವಶರಾದರು. ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸದಸ್ಯರು ಮತ್ತು ಕಡಿಯಾಳಿ ಭಾರತೀಯ ಜನತಾ ಪಾರ್ಟಿಯ ಕ್ರಿಯಾಶೀಲ ಸದಸ್ಯರಾಗಿದ್ದ ಇವರು ಕೋವಿಡ್ ಸಂದರ್ಭದಲ್ಲಿ ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ಅನ್ನದಾನ ಸೇವೆಯಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡಿದ್ದರು. ಸುಧೀರ್ ಭಟ್ ರವರು ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು.
ಇವರು ತಾಯಿ, ಪತ್ನಿ, ಒರ್ವ ಪುತ್ರನ್ನು, ಸಹೋದರನನ್ನು ಆಗಲಿದ್ದಾರೆ. ಇವರ ನಿಧನಕ್ಕೆ ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿ, ಅಯ್ಯಪ್ಪ ಭಕ್ತವೃಂದ ಉಡುಪಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.