
ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ, ನವದೆಹೆಲಿ ಇದರ ಮಂಗಳೂರು ಶಾಖೆಯ 50 ನೇ ವಾರ್ಷಿಕ ಮಹಾ ಸಭೆ ಜುಲೈ 09 2021 ರಂದು “ಐಸಿಎಐ ಭವನ” ಪಡೀಲ್, ಮಂಗಳೂರಿನಲ್ಲಿ ಜರುಗಿತು. COVID ನಿರ್ಬಂಧಗಳಿಂದಾಗಿ “ಫಿಜಿಟಲ್” ರೂಪದಲ್ಲಿ ಆನ್ಲೈನ್ “ಜೂಮ್” ಪ್ಲಾಟ್ ಫಾರ್ಮ್ನಲ್ಲಿ ಸಭೆಯನ್ನು ನಡೆಸಲಾಯಿತು. ಶಾಖೆಯ ಅಧ್ಯಕ್ಷ ಸಿಎ ಕೆ.ಎಸ್.ಕಾಮತ್ ಅವರು ಸಮಿತಿಯ ಸದಸ್ಯರು ಮತ್ತು ಜೂಮ್ ಪ್ಲಾಟ್‌ಫಾರ್ಮ್ ಮೂಲಕ ಎಜಿಎಂಗೆ ಹಾಜರಾದವರನ್ನು ಸ್ವಾಗತಿಸಿದರು.
ಸಿಎ ಸದಸ್ಯರು ಮತ್ತು ವಿದ್ಯಾರ್ಥಿಗಳ ವಾರ್ಷಿಕ ವರದಿಯನ್ನು ಹಾಗು ಲೆಕ್ಕಪರಿಶೋಧಿಸಿದ ಬ್ಯಾಲೆನ್ಸ್ ಶೀಟ್ ಹಾಗು ಆದಾಯ ಮತ್ತು ಖರ್ಚು ಪಟ್ಟಿಯನ್ನು ಸಭೆಯಲ್ಲಿ ಮಂಡಿಸಲಾಯಿತು. ಈ ವರದಿಯನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಶಾಖೆಯ ಕಾರ್ಯದರ್ಶಿ ಸಿಎ ಪ್ರಸನ್ನ ಶೆಣೈ ಎಂ.ಧನ್ಯವಾದ ಸಮರ್ಪಿಸಿದರು .
ಸಿಎ ಗೌತಮ್ ನಾಯಕ್, ಖಜಾಂಚಿ; ಸಿಎ ಗೌತಮ್ ಪೈ ಡಿ; ಸಿಕಾಸಾ ಅಧ್ಯಕ್ಷರು; ಸಿಎ ಎಸ್.ಎಸ್.ನಾಯಕ್, ನಿಕಟಪೂರ್ವ ಅಧ್ಯಕ್ಷರು; ಮಾಜಿ ಅಧ್ಯಕ್ಷರಾದ ಸಿಎ ಅನಂತ ಪದ್ಮನಾಭ ಮತ್ತು ಅನೇಕ ಸಿ ಎ ಸದಸ್ಯರು ಉಪಸ್ಥಿತರಿದ್ದರು.
ಮಾಜಿ ಅಧ್ಯಕ್ಷರುಗಳಾದ ಸಿಎ ಎಂ ಎನ್ ಪೈ, ಸಿಎ ಕೇಶವ ಬಳ್ಳುಕುರಾಯ ಹಾಗು ಸಿಎ ಭಾರ್ಗವ ತಂತ್ರಿ ಅನೇಕ ಸಲಹೆ, ಸೂಚನೆಗಳನ್ನು ತಿಳಿಸಿದರು. ಮಂಗಳೂರು ಶಾಖೆಯ ಅನೇಕ ವೃತ್ತಿಪರ, ವಿದ್ಯಾರ್ಥಿಪರ ಹಾಗು ಜನಪರ ಕಾರ್ಯಕ್ರಮಗಳನ್ನು ಅನೇಕ ಸಿಎ ಸದಸ್ಯರು ಮುಕ್ತ ಕಂಠದಿಂದ ಶ್ಲಾಘಿಸಿದರು . ಪ್ರಸ್ತುತ ವರ್ಷ 2020-21 ರಲ್ಲಿ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಮಂಗಳೂರು ಶಾಖೆಯು ಕೋವಿಡ್ ಸಂದರ್ಭದಲ್ಲಿ ವೆನ್ಲಾಕ್ ಆಸ್ಪತ್ರೆಗೆ ರೂ. 7.50 ಲಕ್ಷ ವೆಚ್ಚದ ಸಲಕರಣೆಗಳನ್ನು 73 ನೆೇ ಸಿಎ ದಿನದ ಆಚರಣೆಯ ಅಂಗವಾಗಿ, ಬಾಲ ಸಂರಕ್ಷಣಾ ಕೇಂದ್ರ, ಕುತ್ತಾರು ಪದವು ಇವರಿಗೆ ರೂ. 73,000/- ಹಾಗು ಸಿಎ ಸದಸ್ಯರಿಗೆ, ಸಿಎ ವಿದ್ಯಾರ್ಥಿಗಳಿಗೆ ಮತ್ತು ಕುಟುಂಬಸ್ಥರಿಗೆ ವ್ಯಾಕ್ಸಿನೇಷನ್ ಸೌಲಭ್ಯ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಅದೇ ರೀತಿ ಜನಪರ ಕಾರ್ಯಕ್ರಮಗಳಾದ ಕೇಂದ್ರ ಬಜೆಟ್ ವಿಶ್ಲೇಷಣೆ, ಗ್ಲೋಬಲ್ ಎಂ. ಎಸ್. ಎಂ . ಈ. ದಿನಾಚರಣೆ ಇತ್ಯಾದಿ ಕಾರ್ಯಕ್ರಮಗಳನ್ನು ಇತರ ಸಂಘ ಸಂಸ್ಥೆಗಳೊಂದಿಗೆ ಕೈಜೋಡಿಸಿ ಕಾಲ ಕಾಲಕ್ಕೆ ಆಯೋಜಿಸುತ್ತಿದೆ .