
ಚಿಕ್ಕಮಗಳೂರು: ಜು 22: ಚಿಕ್ಕಮಗಳೂರು ನಗರದ ರಾಮನಹಳ್ಳಿ ಬಳಿ ಕಾರು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ರೈತ ಮುಖಂಡರು ಸಾವನ್ನಪ್ಪಿ
ರಾಮನಗರದ ಮೂಲದ ರಾಜ್ಯ ರೈತ ಸಂಘದ ಉಪ್ಯಾಧ್ಯಕ್ಷ ರಾಮಸ್ವಾಮಿ (70 ವ), ಹಾಸನ ಜಿಲ್ಲೆಯ ಬೇಲೂರಿನವರಾದ ರಾಜ್ಯ ರೈತ ಸಂಘ ಕಾರ್ಯದರ್ಶಿ ರಾಮಪ್ಪ (55 ವ) ಅಪಘಾತದಲ್ಲಿ ಮೃತ ಪಟ್ಟವರು.
ಕಾರು ನವಲಗುಂದದಿಂದ ಬೇಲೂರಿಗೆ ಹೋಗುತ್ತಿದ್ದ ವೇಳೆ ಅಪಘಾತ ನಡೆದಿದೆ. ಕಾರನಲ್ಲಿದ್ದ ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ.ಚಿಕ್ಕಮಗಳೂರು ಟ್ರಾಫಿಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.