
18 ವರ್ಷ ಮೇಲ್ಪಟ್ಟ ಕಾಲೇಜು ವಿದ್ಯಾರ್ಥಿಗಳಿಗಾಗಿ “ವ್ಯಾಕ್ಸಿಂಗ್ ಅಭಿಯಾನ” ನಡೆಯುತ್ತಿದ್ದು, ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಲಸಿಕಾ ಅಭಿಯಾನಕ್ಕೆ ಇಂದು ದಿನಾಂಕ 28-06-2021 ರಂದು ಶಾಸಕ ಶ್ರೀ ಕೆ. ರಘುಪತಿ ಭಟ್ ರವರು ಚಾಲನೆ ನೀಡಿದರು.*
ಈ ಸಂದರ್ಭದಲ್ಲಿ ತೆಂಕನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಾಯತ್ರಿ, ಸದಸ್ಯರಾದ ಶಾಲಿನಿ ಆಚಾರ್ಯ, ಪ್ರಶಾಂತ್ ಹೆಬ್ಬಾರ್, ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಬಾಲಕೃಷ್ಣ ಹೆಗ್ಡೆ, ಕೆಮ್ಮಣ್ಣು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಪ್ರೀಮಾ ಹಾಗೂ ಕಾಲೇಜಿನ ಉಪನ್ಯಾಸಕರು, ವೈದ್ಯಕೀಯ ಸಿಬ್ಬಂದಿಯವರು ಉಪಸ್ಥಿತರಿದ್ದರು.