
ಶ್ರೀ ವಾಲ್ಮೀಕಿ ಮಹರ್ಷಿಗುರುಪೀಠದ ಸನ್ನಿದಾನದಲ್ಲಿ ಜರುಗು ನೂತನ ತೇರು ನಿರ್ಮಾಣಕ್ಕೆ ಸಚಿವ ಆನಂದ ಸಿಂಗ್ ರವರು,ಒಂದು ಕೋಟಿರೂಗಳನ್ನು ಮಂಜೂರು ಮಾಡಿದ್ದಾರೆ ಎಂದು ವಾಲ್ಮೀಕಿ ಯವ ಮುಖಂಡ ಹಾಗೂ ಬಿ.ಜೆ.ಪಿ ಎಸ್ಟಿ ಮೋರ್ಚ ಜಿಲ್ಲಾಧ್ಯಕ್ಷ ಬಂಗಾರು ಹನುಮಂತು ಸ್ಪಷ್ಟಪಡಿಸಿದ್ದಾರೆ. ಅದಕ್ಕಾಗಿ ಆನಂದಸಿಂಗ್ ರವರಿಗೆ ಸಮುದಾಯದಿಂದ ಅಭಿನಂದನೆ ಸಲ್ಲಿಸುತ್ತಿರುವುದಾಗಿ ತಿಳಿಸಿದ್ದಾರೆ.
ಸಚಿವ ಆನಂದಸಿಂಗ್ ರವರು ವಾಲ್ಮೀಕಿ ಗುರು ಪೀಠಕ್ಕೆ ಬೆಟ್ಟಿನೀಡಿ ಶ್ರೀಗಳ ದರ್ಶನ ಪಡೆದಾಗ, ಸಚಿವರಲ್ಲಿ ಸ್ವಾಮೀಜಿಗಳು ತೇರು ನಿರ್ಮಾಣಕ್ಕಾಗಿ ಅನುದಾನ ನೀಡುವಂತೆ ತಿಳಿಸಿದ್ದರು. ಆನಂದ್ ಸಿಂಗ್ ರವರು ತಾವು ನೀಡಿದ ಭರವಸೆಯಂತೆ ಡಿ16ರಂದು ಮಹರ್ಷಿ ವಾಲ್ಮೀಕಿ ಗುರುಪೀಠ ಟ್ರಸ್ಟ್ ಹೆಸರಿನ ಬ್ಯಾಂಕ್ ಖಾತೆಗೆ, ಆರ್.ಟಿ.ಜಿ.ಎಸ್. ಮೂಲಕ 1ಕೋಟಿ ರೂ ವರ್ಗಾವಣೆ ಮಾಡಿಸಿದ್ದಾರೆಂದು ಬಂಗಾರು ಹನುಮಂತು ಖಚಿತ ಪಡಿಸಿದ್ದಾರೆ. ಅದಕ್ಕಾಗಿ ಸಚಿವ ಆನಂದ ಸಿಂಗ್ ರವರಿಗೆ ಶ್ರೀಗಳಿಂದ ಹಾಗು ಸಮುದಾಯದಿಂದ, ಸಮುದಾಯದ ಸಮಸ್ಥ ಜನಪ್ರತಿನಿಧಿಗಳಿಂದ ಅಭಿನಂದನೆ ಸಲ್ಲಿಸಲಾಗುತ್ತದೆ ಎಂದು ಬಂಗಾರು ಹನುಮಂತು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಸದಸ್ಯರಾದ ಶ್ರೀಮತಿ ಹುಲಿಗೆಮ್ಮ ಸೋಮಪ್ಪ ಸೇರಿದಂತೆ ಇತರರು ಇದ್ದರು.