ಕರಾವಳಿ
Trending

ಜಿಲ್ಲಾಡಳಿತದ ವಿರುದ್ದ ಆಧಾರರಹಿತ ಅಪವಾದ ಮಾಡಿದರೆ ಕಠಿಣ ಕ್ರಮ : ಜಿಲ್ಲಾಧಿಕಾರಿ ಜಿ ಜಗದೀಶ

ಉಡುಪಿ ಜೂನ್ 10 : ಕೋವಿಡ್-19 ವಿರುದ್ದ ಜಿಲ್ಲಾಡಳಿತ ಕೈಗೊಂಡಿರುವ ಕಾರ್ಯಗಳ ಕುರಿತು ಸುಖಾ ಸುಮ್ಮನೇ , ಯಾವುದೇ ಆಧಾರವಿಲ್ಲದೇ , ಸಾಮಾಜಿಕ ಮಾದ್ಯಮದಲ್ಲಿ ಅವಹೇಳನವಾಗಿ ಅಪವಾದ ಪ್ರಕಟಿಸುವವರ ವಿರುದ್ದ ಎಪಿಡಮಿಕ್ ಆಕ್ಟ್ ಅನ್ವಯ ಪ್ರಕರಣ ದಾಖಲಿಸಿ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ ಕಂಡು ಬಂದಿರುವ 947 ಪಾಸಿಟಿವ್ ಪ್ರಕರಣ ಪೈಕಿ ಎಲ್ಲಾ ರೋಗಿಗಳಿಗೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡಿದ್ದು, ಜಿಲ್ಲಾಡಳಿತ ಹಾಗೂ ಯಾವುದೇ ಸಂಸ್ಥೆಯ ವಿರುದ್ದ ಇಲ್ಲಸಲ್ಲದ ಕಲ್ಪನೆ ಮಾಡಿಕೊಂಡು ಆಧಾರರಹಿತ ಅಪವಾದ ಮಾಡಿ, ಪ್ರಕಟಿಸುವುದು ಸಹಿಸಲು ಅಸಾಧ್ಯವಾದ ಅಪವಾದವಾಗಿದ್ದು, ಯಾರೇ ಆದರೂ ಸಾಮಾಜಿಕ ಮಾಧ್ಯಮದಲ್ಲಿ ಮನಸ್ಸಿಗೆ ಬಂದದ್ದು ಬರೆಯಬಹುದು ಎಂಬುದು ಅವರ ತಪ್ಪು ಕಲ್ಪನೆ,ಅಂತಹವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!