ಕರಾವಳಿ

ಸುವರ್ಣ ತ್ರಿಭುಜದಲ್ಲಿ ಪ್ರಾಣ ಕಳೆದುಕೊಂಡ ಮೊಗವೀರ ಕುಟುಂಬಕ್ಕೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಉದ್ಯೋಗ ನೀಡಲು ಒತ್ತಾಯಿಸಿದ್ದಾರೆ!!

ಉಡುಪಿ: ಸುವರ್ಣ ತ್ರಿಭುಜದಲ್ಲಿ ಬೋಟಿನಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ಪ್ರಾಣ ಕಳೆದುಕೊಂಡ ಮೋಗವೀರ ಕುಟುಂಬಕ್ಕೆ ಉದ್ಯೋಗ ನೀಡಲು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಒತ್ತಾಯ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಅವರಿಗೆ ಮನವಿ ಸಲ್ಲಿಸಿದೆ.

ಮಂಗಳವಾರ ಮೀನುಗಾರರ ಸಮಸ್ಯೆ ಆಲಿಸಲು ಉಡುಪಿ ಜಿಲ್ಲೆಗೆ ಆಗಮಿಸಿದ ಮಾಜಿ ಸಚಿವ,ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಡಿಕೆ ಶಿವಕುಮಾರ್ ಆಗಮಿಸಿದ ವೇಳೆ ನೂರಾರು ಮೀನುಗಾರರು ಡಿಕೆ ಶಿವಕುಮಾರ್ ಮುಂದೆ ತಮ್ಮ ಅಳಲನ್ನು ವ್ಯಕ್ತಪಡಿಸಿಕೊಂಡು  ಬೇಡಿಕೆಯನ್ನು ಇಟ್ಟರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ದೀಪಕ್ ಕೋಟ್ಯಾನ್ ನೇತೃತ್ವದಲ್ಲಿ ಕರಾವಳಿಗರಿಗೆ ಮರೆಯಲಾದ ಸುವರ್ಣ ತ್ರಿಭುಜ ಬೋಟ್ ದುರಂತದ ಕುರಿತು ಮನವಿ ಸಲ್ಲಿಸಲಾಯಿತು.

2018 ರ ಡಿಸೆಂಬರ್‌ 15ರಂದು “ಸುವರ್ಣ ತ್ರಿಭುಜ” ಬೋಟ್ ನಾಪತ್ತೆಯಾಗಿದ್ದು ಚುನಾವಣಾ ದುರುದ್ದೇಶದಿಂದ ನೌಕಾಸೇನೆ ಡಿಕ್ಕಿ ಹೊಡೆದ ವಿಚಾರ ಮುಚ್ಚಿಟ್ಟು ಬಡ ಮೀನುಗಾರ ಕುಟುಂಬದೊಂದಿಗೆ ರಾಜ್ಯ ಹಾಗೂ ಕೇಂದ್ರ ಸರಕಾರ ಅನ್ಯಾಯ ಮಾಡಿತ್ತು.

ಘಟನೆಯಿಂದ ಮೋಗವೀರರು ಮೃತರಾಗಿದ ಕುಟುಂಬಗಳಿಗೆ ಸರಕಾರ ಕೇವಲ ಪರಿಹಾರ ನೀಡಿ ಕೈತೊಳೆದುಕೊಂಡಿದೆ. ಆದರೆ ಜೀವನಕ್ಕೆ ಆಧರವಾಗಿದ್ದ ಮನೆಯ ಸದಸ್ಯರನ್ನು ಕಳೆದುಕೊಂಡ ಕುಟುಂಬ ಸಂಕಷ್ಟದಲ್ಲಿ ಬಳಲುತ್ತಿದ್ದೆ. ಆದ್ದರಿಂದ ಕೇಂದ್ರ ಸರಕಾರ ಪ್ರತಿ ಕುಟುಂಬದ ಒಬ್ಬ ಸದಸ್ಯನಿಗೆ ಸರಕಾರಿ ಉದ್ಯೋಗ ನೀಡಬೇಕೆಂದು ಈ ಮೂಲಕ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಒತ್ತಾಯಿಸಿದೆ.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker