ರಾಷ್ಟ್ರೀಯ

ಮುಟ್ಟುಗೋಲು ಹಾಕಿಕೊಂಡ ವಾಹನಗಳಲ್ಲಿ ತರಕಾರಿ ಬೆಳೆ…!

ದೇಶದ ಹಲವು ಭಾಗದಲ್ಲಿ ಮುಟ್ಟುಗೋಲು ಹಾಕಿಕೊಂಡ ವಾಹನಗಳು ವರ್ಷವಾದರೂ, ವಿಲೇವಾರಿಯಾಗದೇ ನಿಂತಿರುವುದನ್ನು ನೋಡುವುದು ಸಾಮಾನ್ಯ. ಆದರೆ ಕೇರಳದ ಪೊಲೀಸರು ಈ ರೀತಿ ಮುಟ್ಟುಗೋಲು ಹಾಕಿಕೊಂಡ ವಾಹನಗಳಲ್ಲಿ ತರಕಾರಿ ಬೆಳೆಯುವ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ತ್ರಿಶೂರ್‌ ಜಿಲ್ಲೆಯ ಚೆರುಥುರೂರ್ತಿ ಎನ್ನುವ ಠಾಣೆಯಲ್ಲಿ ಈ ರೀತಿಯ ವಿನೂತನ ಪ್ರಯತ್ನಕ್ಕೆ ಸಿವಿಲ್‌ ಪೊಲೀಸರು ಮುಂದಾಗಿದ್ದಾರೆ. ರೈತನೊಬ್ಬ ಮೊದಲಿಗೆ ಮಿನಿ ಲಾರಿಯಲ್ಲಿ ಈ ರೀತಿ ತರಕಾರಿ ಬೆಳೆಗಳನ್ನು ಬೆಳೆದಿದ್ದು, ಬಳಿಕ ಇತರ ವಾಹನಗಳ ಮೇಲೆಯೂ ತರಕಾರಿ ಬೆಳೆಯಲಾಗುತ್ತಿದೆ. ಈ ರೀತಿ ವಾಹನಗಳನ್ನು ಬಳಸಿಕೊಳ್ಳುವುದರಿಂದ, ವ್ಯರ್ಥವಾಗಿ ನಿಂತಿರುವ ವಾಹನಗಳು ಬಳಕೆಗೆ ಯೋಗ್ಯವಾಗುತ್ತದೆ ಎನ್ನುವ ಮಾತನ್ನು ಅಧಿಕಾರಿಗಳು ಹೇಳಿದ್ದಾರೆ.

ಈ ಬಗ್ಗೆ ಸ್ಥಳೀಯ ಪೊಲೀಸ್ ಅಧಿಕಾರಿ‌ ಸಿಂಪ್ಸನ್‌ ಮಾತನಾಡಿದ್ದು, ಮಿನಿ ಲಾರಿಯಲ್ಲಿ ಈ ರೀತಿ ತರಕಾರಿ ಬೆಳೆಯುವ ಪ್ರಯತ್ನಕ್ಕೆ ಮುಂದಾದೆವು. ಇದಕ್ಕೆ ಬೇಕಿರುವ ಮಣ್ಣು, ಗೊಬ್ಬರವನ್ನು ಹಾಕಲಾಯಿತು. ಮೂರು ತಿಂಗಳ ಬಳಿಕ ಉತ್ತಮ ಇಳುವರಿ ನೀಡಿದ್ದರಿಂದ, ಇತರೆ ವಾಹನಗಳ ಮೇಲೆಯೂ ಪ್ರಯೋಗಿಸಲಾಗಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker