
ಮಂಗಳೂರು: ಬೆಳ್ತಂಗಡಿ ಶಾಲೆಯ ಬಾಲಕಿ ಶ್ರೇಯಾ ಡೋಂಗ್ರೆ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರಪತ್ರಿಕೆಗಳ ಮರುಮೌಲ್ಯಮಾಪನ ಮಾಡಿದಾಗ 625ಕ್ಕೆ 625 ಅಂಕಗಳನ್ನು ಗಳಿಸುವ ಮೂಲಕ ರಾಜ್ಯದ ಟಾಪರ್ ಆಗಿ ಮಿಂಚಿದ್ದಾರೆ. 625ಕ್ಕೆ 622 ಸ್ಕೋರ್ ಮಾಡಿದ್ದ ಶ್ರೇಯಾ ತಮ್ಮ ಉತ್ತರಪತ್ರಿಕೆಗಳ ಮರುಮೌಲ್ಯಮಾಪನ ಮಾಡಿಸಿದ್ದರು.
ಸೇಂಟ್ ಮೇರೀಸ್ ಶಾಲೆಯಲ್ಲಿ ಓದುತ್ತಿದ್ದ ಶ್ರೇಯಾಗೆ ಮರುಮೌಲ್ಯಮಾಪನ ಮಾಡಿಸುವುದಕ್ಕೆ ಇಷ್ಟವಿರಲಿಲ್ಲ. ಆದರೆ ತನ್ನ ಸಾಧನೆಯ ಮರುವಿಮರ್ಶೆ ಮಾಡಿದಾಗ ತಾನು ಯಾವುದೇ ತಪ್ಪು ಮಾಡದಿರುವುದು ಗೊತ್ತಾಯಿತು. ಅವಳ ಅನುಮಾನಕ್ಕೆ ಪುಷ್ಠಿ ನೀಡುವಂತೆ ಮರುಮೌಲ್ಯಮಾಪನ ಮಾಡಿದಾಗ ಇಂಗ್ಲಿಷ್ ಪತ್ರಿಕೆಯಲ್ಲಿ ಸರಿಯಾಗಿದ್ದ ಮೂರು ಉತ್ತರಗಳಿಗೆ ಅಂಕ ನೀಡದೇ ಬಿಟ್ಟಿದ್ದು ಗೊತ್ತಾಯಿತು.
ಶ್ರೇಯಾಳ ತಂದೆ ಮತ್ತು ತಾಯಿ ತಮ್ಮ ಪುತ್ರಿ ಸ್ಟೇಟ್ ಟಾಪರ್ ಆಗಲು ನೆರವಾಗಿದ್ದಕ್ಕೆ ಶಿಕ್ಷಕರಿಗೆ ಮತ್ತು ಹಿತಚಿಂತಕರಿಗೆ ಧನ್ಯವಾದ ಸಲ್ಲಿಸಿದ್ದಾರೆ.