
ಬೆಂಗಳೂರು: ಶ್ರೀ ಗುರುರಾಘವೇಂದ್ರ ಕೋ- ಆಪರೇಟೀವ್ ಬ್ಯಾಂಕ್ ಮಾಜಿ ಸಿಇಓ ಮಣೂರು ವಾಸುದೇವ ಮಯ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ.
ವಾಸುದೇವ ಮಯ್ಯ 2012ರಿಂದ 2018ರವರೆಗಿನ ಬ್ಯಾಂಕು ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರು. ಬ್ಯಾಂಕ್ ವಿರುದ್ದ 1,400 ಕೋಟಿ ರೂ. ಅವ್ಯವಹಾರ ಕೇಳಿ ಬಂದಿತ್ತು. ಹಗರಣದಲ್ಲಿ ಮಣೂರು ವಾಸುದೇವ ಮಯ್ಯ ಪ್ರಮುಖ ಆರೋಪಿಯಾಗಿದ್ದರು. ಜೂನ್ 18 ರಂದು ಎಸಿಬಿ ದಾಳಿ ಮಾಡಿತ್ತು. ದಾಳಿಯ ಬಳಿಕ ವಾಸುದೇವ ಮಯ್ಯ ಮನನೊಂದಿದ್ದರು. ರಾಘವೇಂದ್ರ ಬ್ಯಾಂಕಿನ ಸಿಇಒ ಆಗಿರುವ ಸಂತೋಷ ಅವರು ರಾಘವೇಂದ್ರ ಮಯ್ಯ ವಿರುದ್ಧ ದೂರು ನೀಡಿದ್ದರು.