
ಬೆಂಗಳೂರು: ಕೊರೊನಾ ಲಾಕ್ ಡೌನ್ ನಡುವೆ ಕಿರುತೆರೆ ನಟಿ ನವ್ಯಾ ರಾವ್ ತಮ್ಮ ಪ್ರಿಯಕರ ವರುಣ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.ನಟಿ ನವ್ಯಾ ರಾವ್ ಪುನರ್ವಿವಾಹ, ಅರಗಿಣಿ’ ಧಾರಾವಾಹಿ ಮೂಲಕ ಖ್ಯಾತಿ ಪಡೆದುಕೊಂಡಿದ್ದರು. ನಟಿ ನವ್ಯಾ ಮೊದಲಿಗೆ ‘ಪ್ಯಾಟೆ ಮಂದಿ ಕಾಡಿಗ್ ಬಂದ್ರು’ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು..
ಸೋಮವಾರ ಸರಳವಾಗಿ ಕುಟುಂಬಸ್ಥರ ಮುಂದೆ ಮದುವೆಯಾಗಿದ್ದಾರೆ. ಬೆಂಗಳೂರಿನ ಗಿರಿನಗರದಲ್ಲಿರುವ ಸಾಲಿಗ್ರಾಮ ಪಾರ್ಟಿ ಹಾಲ್ ನಲ್ಲಿ ನವ್ಯಾ ಮತ್ತು ವರುಣ್ ಮದುವೆ ನಡೆದಿದೆ.2020 ಮಾರ್ಚ್ 18ರಂದು ಬೆಂಗಳೂರಿನ ನಂದನಾ ಹೋಟೆಲ್ ನಲ್ಲಿ ಅದ್ಧೂರಿಯಾಗಿ ಸ್ನೇಹಿತರು, ಮನೆಯವರು, ಸಂಬಂಧಿಕರ ಮುಂದೆ ನವ್ಯಾ ಮತ್ತು ವರುಣ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು,ಕನ್ನಡ ಮಾತ್ರವಲ್ಲದೇ ತೆಲುಗು ಸೀರಿಯಲ್ನಲ್ಲೂ ಅಭಿನಯಿಸಿದ್ದಾರೆ. ಸದ್ಯಕ್ಕೆ ನವ್ಯಾ ‘ರಾಮಸೀತಾ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.