ರಾಜ್ಯ

ವಿಶ್ವ ಅಂಗಾಂಗ ದಾನ ದಿನದಂದು ನಾಡಿನ ಜನತೆಗೆ ತಾನೇ ಮಾದರಿಯಾದ ಮುಖ್ಯಮಂತ್ರಿ ; ಸ್ವತ ಅಂಗಾಗ ದಾನ ಮಾಡುವ ಘೋಷಣೆ ಮಾಡಿದ ಸಿಎಂ ಬೊಮ್ಮಾಯಿ ..!

ಉಡುಪಿ: ಅ 13 : ವಿಶ್ವ ಅಂಗಾಂಗ ದಾನ ದಿನದಂದು ಮಹತ್ವದ ನಿರ್ಧಾರ ಕೈಗೊಂಡಿರುವ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ವತ : ತಮ್ಮ ಅಂಗಾಗಗಳನ್ನೂ ದಾನ ಮಾಡುವ ನಿರ್ಧಾರ ತಳೆದಿದ್ದಾರೆ . ಅಂಗಾಗ ದಾನದ ಒಪ್ಪಂದ ಪತ್ರಕ್ಕೆ ಇಂದು ಸಹಿ ಹಾಕುವುದಾಗಿಯೂ ಅವರು ಮಣಿಪಾಲದಲ್ಲಿಂದು ಮಾಧ್ಯಮ ಪ್ರತಿನಿಧಿಗಳ ಮುಂದೆ ಘೋಷಿಸಿದ್ದಾರೆ

“ ಇಂದು ವಿಶ್ವ ಅಂಗಾಂಗ ದಾನ ದಿನ. ಅಂಗಾಂಗ ದಾನದಿಂದ ಬಹಳಷ್ಟು ಜೀವಗಳನ್ನು ಉಳಿಸಬಹುದು. ಆದ್ದರಿಂದ ನಾನು ಕೂಡಾ ಅಂಗಾಂಗ ದಾನಕ್ಕೆ ನಿರ್ಧರಿಸಿದ್ದೇನೆ. ಇಂದು ಈ ಬಗ್ಗೆ ಸಹಿ ಹಾಕಲಿದ್ದೇನೆ. ಎಲ್ಲರೂ ಅಂಗಾಂಗ ದಾನದ ಸಂಕಲ್ಪ ಮಾಡಬೇಕು ಎಂದು ಕರೆ ನೀಡುತ್ತೇನೆ ಎಂದು ಹೇಳಿದರು.

ಸ್ವತ : ತಾವೇ ಅಂಗಾಂಗ ದಾನ ಮಾಡುವ ಘೋಷಣೆ ಮಾಡುವ ಮೂಲಕ ನಾಡಿನ ಜನತೆಗೆ ಮಾದರಿಯಾಗಿದ್ದಾರೆ. ಅಲ್ಲದೇ ಇನ್ನಷ್ಟು ಜನರು ಅಂಗಾಂಗ ದಾನ ಕೈಗೊಳ್ಳುವುದಕ್ಕೆ ಸ್ಪೂರ್ತಿ ಯಾಗಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker