
ಬೆಂಗಳೂರು: ನಟ ಧ್ರುವ ಸರ್ಜಾ ದಂಪತಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಧ್ರುವ ‘ನಾನು ಹಾಗೂ ನನ್ನ ಪತ್ನಿ ಇಬ್ಬರಿಗೂ ಕೊರೋನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಇಬ್ಬರೂ ಆಸ್ಪತ್ರೆಗೆ ಸೇರಿದ್ದೇವೆ. ನಮ್ಮ ಜತೆಗೆ ಇತ್ತೀಚೆಗೆ ಭೇಟಿಯಾದವರೆಲ್ಲರೂ ಪರೀಕ್ಷೆಗೊಳಪಡಿ’ ಎಂದು ಮನವಿ ಮಾಡಿದ್ದಾರೆ. ಇನ್ನು, ಧ‍್ರುವ ದಂಪತಿ ಬೇಗನೇ ಗುಣ ಮುಖರಾಗಲೆಂದು ಚಿತ್ರರಂಗದ ಗೆಳೆಯರು, ಅಭಿಮಾನಿಗಳು ಹಾರೈಸುತ್ತಿದ್ದಾರೆ.