
ನಾಮಪತ್ರ ಸಲ್ಲಿಸುವಾಗ ಬಹುತೇಕರು ಗಂಭೀರವಾಗಿ ಸರಳ ರೀತಿಯಲ್ಲಿ ಸಲ್ಲಿಸುವುದು ಸಾಮಾನ್ಯ. ಆದರೆ ಇಲ್ಲೊಬ್ಬರು ಸರ್ವಾಲಂಕಾರಭೂಷಿತನಂತೆ ಕೆಜಿಗಟ್ಟಲೆ ಬಂಗಾರವನ್ನು ಮೈಮೇಲೆ ಪ್ರದರ್ಶಿಸಿ ನಾಮಪತ್ರ ಸಲ್ಲಿಸಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸುದ್ಧಿಯಾಗಿದ್ದಾರೆ.
ತಮಿಳುನಾಡಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಅಲಂಗುಲಮ್ ವಿಧಾನಸಭಾ ಕ್ಷೇತ್ರದಿಂದ ಹರಿ ನಾಡರ್ ಎಂಬವರು 4.73 ಕೋಟಿ ರೂಪಾಯಿ ಮೌಲ್ಯದ ಬರೋಬ್ಬರಿ 4.27 ಕೆಜಿ ಚಿನ್ನಾಭರಣಗಳನ್ನು ಧರಿಸಿ ನಾಮಪತ್ರ ಸಲ್ಲಿಸಿದರು.
ಇವರು ಎಷ್ಟು ಮತಗಳನ್ನು ಪಡೆಯುತ್ತಾರೆ ಎಂಬುದು ಸದ್ಯಕ್ಕೆ ಮುಖ್ಯವಲ್ಲ. ಆದರೆ ಒಂದಿಷ್ಟು ದಿನಗಳ ಕಾಲ ಇವರ ಬಗ್ಗೆಯೇ ಜನರು ಮಾತನಾಡುವ ಹಾಗೆ ಮಾಡಿದ್ದಾರೆ!