
ಉಡುಪಿ : ಕೊಡವೂರುನಲ್ಲಿ ಹಿಂದೆ ಸುಮಾರು 178 ಮನೆಯವರು ಕೃಷಿ ಮಾಡುತಿದ್ದರೂ, ಕಳೆದ ಬಾರಿ ಕೇವಲ 13 ಮನೆಯವರು ಮಾತ್ರ ಕೃಷಿ ಮಾಡಿದರು. ಇದರ ಹಿಂದಿರುವ ಕಾರಣಗಳು ಅನೇಕ ಬಯಲುದ್ದಕು ಮನೆಗಳು ನಿರ್ಮಾಣ ಆಗಿದೆ, ನೀರು ಹೋಗುವ ದಾರಿ ಕಣ್ಮರೆ ಆಗಿದೆ, ಕೃಷಿ ಮಾಡಿದರೆ ಬೇರೆ ಬೇರೆ ಜೀವಿಗಳು ನವಿಲು, ದನ ತಿಂದು ಹಾಳು ಮಾಡುತ್ತದೆ. ಸರಿಯಾದ ಸಂದರ್ಭದಲ್ಲಿ ಕೃಷಿಗೆ ಬೇಕಾದ ಸಲಕರಣೆ ಸಿಗುವುದಿಲ್ಲ ಟ್ಯಾಕ್ಟರ್, ನಾಟಿ ಮಷೀನ್, ಕಟ್ಟಿಂಗ್ ಮಿಷಿನ್, ಕೂಲಿಗಳು ಸಮಯಕ್ಕೆ ಸರಿಯಾಗಿ ಸಿಗುವುದಿಲ್ಲ. ಕಷ್ಟ ಪಟ್ಟು ನಾಟಿ ಮಾಡಿದರು ನವಿಲು,ಹಂದಿ ನಾಶ ಮಾಡಿ ಬಿಡುತ್ತದೆ. ಆದರಿಂದ ಸುಮಾರು 100 ಎಕರೆ ಗಿಂತಲೂ ಹೆಚ್ಚು ಮಾಡುತಿದ್ದ ಕೃಷಿ 5 ಎಕರೆಗೆ ಬಂದು ನಿಂತಿದೆ.
ಈ ವರ್ಷ ಕೆ. ವಿಜಯ ಕೊಡವೂರು ಮುಂದಾಳತ್ವ ದಲ್ಲಿ ಸರಿ ಸುಮಾರು 30 ಎಕರೆ ಜಾಗದಲ್ಲಿ ಕೃಷಿ ಮಾಡಿದ್ದು ಶ್ಲಾಘನೀಯ. ಸ್ವತಃ ಟ್ಯಾಕ್ಟರ್ ಖರೀದಿ ಮಾಡಿ, ಈ ಭಾಗದ ರೈತರ ಮನೆ ಮನೆಗೆ ಸಂಪರ್ಕ ಮಾಡಿ ಕೃಷಿಗೆ ಮೊದಲ ಆದ್ಯತೆ ನೀಡುತ್ತೇವೆ ಮತ್ತು ಬೇಕಾಗುವ ಸಲಕರಣೆಯನ್ನು ಸರಿಯಾದ ಸಮಯಕ್ಕೆ ನೀಡುತ್ತೇವೆ ಎಂದು ಭರವಸೆ ನೀಡಿ ಕೃಷಿಕರ ಮನವೊಲಿಸಿ, ಪಂಚ ಧೂಮಾವತಿ ದೈವದ ಸಮಿತಿ ಮತ್ತು ಅನೇಕ ಸಂಘ ಸಂಸ್ಥೆಗಳು ಸಹಕಾರ ದೊಂದಿಗೆ ಪಾಳು ಬಿದ್ದ ಭೂಮಿಯಲ್ಲಿ ನಾಟಿ ಮಾಡಿದ್ದಾರೆ.
ಪಾಳು ಬಿಟ್ಟ ಜಾಗವನ್ನು ಕೃಷಿ ಮಾಡಬೇಕು ಎನ್ನುವ ಡಿಸಿ ಅವರ ಸೂಚನೆಯನ್ನು ಸ್ವಾಗತಿಸುತ್ತೇವೆ. ಕೃಷಿಕರನ್ನು ಒಟ್ಟು ಮಾಡಿ ಕೃಷಿಕರ ಸಮಸ್ಯೆಯನ್ನು ತಿಳಿದುಕೊಂಡು ಅದಕ್ಕೆ ಬೇಕಾದ ವ್ಯವಸ್ಥೆಯನ್ನು ವ್ಯವಸಾಯ ಸೇವಾ ಸಂಘಗಳ ಮುಖಾಂತರ ನೀಡಿ, ಮುಂದಿನ ದಿನಗಳಲ್ಲಿ ಎಲ್ಲಾ ಮನೆಗಳಿಗೂ ತರಕಾರಿ ಬೀಜ ನೀಡಿ ಸಾವಯವ ತರಕಾರಿ ಬೆಳೆಸಿ, ಸಾವಯವ ಸಂತೆಯ ಮುಖಾಂತರ ಆರೋಗ್ಯ ವಂತ ಸಮಾಜವನ್ನು ನಿರ್ಮಾಣ ಮಾಡಬೇಕೆಂದು ಕೆ. ವಿಜಯ ಕೊಡವೂರು, ನಗರ ಸಭೆ ಸದಸ್ಯರು ತಿಳಿಸಿದ್ದಾರೆ.