ಬೈಂದೂರು : ಜಾಗ ಮಾರಾಟ ಮಾಡಿದ್ದ ಬ್ರೋಕರ್ ನಿಂದಲ್ಲಿ ವಂಚನೆ; ದೂರು ದಾಖಲು

ಬೈಂದೂರು : ಜಾಗವನ್ನು ಮಾರಾಟ ಮಾಡುವುದಾಗಿ ಕರಾರು ಪತ್ರ ಮಾಡಿಸಿಕೊಂಡು ವಂಚಿಸಿರುವುದಾಗಿ ರೀಯಲ್ ಎಸ್ಟ್ರೇಟ್ ಬ್ರೋಕರ್ ಕೆ. ಹರಿಪ್ರಸಾದ್ ಶೆಟ್ಟಿ ಸೇರಿ ಐವರ ವಿರುದ್ಧ ಕುಂದಾಪುರದ ಹಾರ್ದಳ್ಳಿ-ಮಂಡಳ್ಳಿ ಗ್ರಾಮದ ನವೀನ ಕಂದಾವರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ನವೀನ ಕಂದಾವರ ಅವರು ಕಿದಿಜಿ ವಸಂತಿ ಹೆಗ್ಡೆರವರಿಗೆ ಸಂಬಂಧಿಸಿದ ಬ್ರಹ್ಮಾವರದ 52 ನೇ ಹೇರೂರು ಗ್ರಾಮದ ಸ. ನಂ 162-03 ರಲ್ಲಿ 5.03 ಎಕ್ರೆ ಹಾಗೂ ಸ.ನಂ 19-30 ರಲ್ಲಿ 0.65 ಎಕ್ರೆ ಸ.ನಂ 19 ರಲ್ಲಿ 0.51 ಎಕ್ರೆ, 0.10 ಎಕ್ರೆ , 0.05 ಎಕ್ರೆ (ಒಟ್ಟು 6.34 ಎಕ್ರೆ) ಜಾಗವನ್ನು ಖರೀದಿಸುವ
ಬಗ್ಗೆ ರೀಯಲ್ ಎಸ್ಟೇಟ್ ಬ್ರೋಕರ್ ಕೆ. ಹರಿಪ್ರಸಾದ ಶೆಟ್ಟಿ ಮುಖಾಂತರ ಕರಾರು ಪತ್ರ ಮಾಡಿಕೊಂಡಿದ್ದರು. ಇವರು ಕರಾರು ಪತ್ರಗಳು ಹಾಗೂ ಇತರ ಜಾಗದ ದಾಖಲೆಗಳನ್ನು ಒಂದು ಬ್ಯಾಗ್ ನಲ್ಲಿ ಇಟ್ಟು ತಾವು ವಾಸವಿದ್ದ ಬೈಂದೂರಿನ ಶಿರೂರು ಗ್ರಾಮದ ನಡಹಿತ್ತು ದೊಂಬೆ ಸಮೀಪದ ಕೆ.
ಹರಿಪ್ರಸಾದ ಶೆಟ್ಟಿ ರವರ ಗೆಸ್ಟ್ ಹೌಸ್ ರೂಂ ನಲ್ಲಿ ಇಟ್ಟು ಬೀಗ ಹಾಕಿದ್ದರು.
ಈ ನಡುವೆ ಆರೋಪಿತರಾದ ಕೆ.ಹರಿಪ್ರಸಾದ ಶೆಟ್ಟಿ, ಕಿದಿಜಿ ವಸಂತಿ ಶೆಟ್ಟಿ, ತಾರನಾಥ ಶೆಟ್ಟಿ, ರೇಖಾ ತಾರನಾಥ ಶೆಟ್ಟಿ, ಅನೀಶ್ ಮ್ಯಾಥೀವ್ ಇವರು ಜಾಗವನ್ನು ರಿಜಿಸ್ಟರ್ ಮಾಡಿಕೊಡಲು ತಕರಾರು ಮಾಡಿದ್ದಾರೆ. ಮಾತ್ರವಲ್ಲದೆ, ಕಿದಿಜಿ ವಸಂತಿ ಹೆಗ್ಗರವರ ಜಾಗವನ್ನು ನನಗೆ ರಿಜಿಸ್ಟರ್ ಮಾಡಿಕೊಡದೇ ವಂಚನೆ ಮಾಡುವ ಉದ್ದೇಶದಿಂದ ಅನಿಶ್ ಮ್ಯಾಥ್ಯು ಮುಖಾಂತರ ಜ.10 ರಿಂದ ಫೆ.21ರ ಮಧ್ಯಾವಧಿಯಲ್ಲಿ ನವೀನ ಕಂದಾವರ ಅವರು ವಾಸವಿದ್ದ ಗೆಸ್ಟ್ ಹೌಸ್ ರೂಂ ನ ಬಾಗಿಲ ಬೀಗವನ್ನು ಮುರಿದು ಒಳಗಡೆ ಇರಿಸಿದ್ದ ದಾಖಲೆಗಳು, ಚೆಕ್ ಪುಸ್ತಕ ಹಾಗೂ ಚಿಕ್ ಹಾಳೆ ಮತ್ತು 2 ಮೊಬೈಲ್ ಗಳಿದ್ದ ಬ್ಯಾಗ್ ನ್ನು ಕಳವು ಮಾಡಿದ್ದರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.