
ಕೊಲಂಬೋ: ಎರಡನೇ ಟಿ20 ಪಂದ್ಯದಲ್ಲಿ ಭಾರತ ವಿರುದ್ಧ ಶ್ರೀಲಂಕಾ 4 ವಿಕೆಟ್ ಗಳ ಜಯ ಸಾಧಿಸಿದೆ.
ಧನಂಜಯ ಡಿ ಸಿಲ್ವಾ ಬ್ಯಾಟಿಂಗ್ ಹೋರಾಟ ಮತ್ತು ಬೌಲರ್ ಗಳಿಂದಾಗಿ 4 ವಿಕೆಟ್‍ಗಳ ಜಯ ಗಳಿಸಿದೆ. ಈ ಮೂಲಕ ಸರಣಿ 1-1 ಸಮಬಲವಾಗಿದೆ.
ಭಾರತ ನೀಡಿದ 133ರನ್‍ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಶ್ರೀಲಂಕಾ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಆರಂಭಿಕ ಆಟಗಾರ ಅವಿಷ್ಕಾ ಫರ್ನಾಂಡೊ ಕೇವಲ 11ರನ್(13 ಎಸೆತ, 2 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿ ಹೊರ ನಡೆದರು. ಆದರೆ ಇನ್ನೋರ್ವ ಆರಂಭಿಕ ಆಟಗಾರ ಮಿನೋಡ್ ಭನುಕಾ ಸಿಡಿಯುವ ಸೂಚನೆ ನೀಡಿದರು ಕೂಡ 36ರನ್(31 ಎಸೆತ, 4ಬೌಂಡರಿ) ಸಿಡಿಸಿ ಔಟ್ ಆದರು.
ಮಧ್ಯಮಕ್ರಮಾಂಕದಲ್ಲಿ ಬಂದ ಧನಂಜಯ ಡಿ ಸಿಲ್ವಾ 40ರನ್(34 ಎಸೆತ, 1ಬೌಂಡರಿ, 1 ಸಿಕ್ಸ್) ಬಾರಿಸಿ ಅಜೇಯರಾಗಿ ಕಡೆಯವರೆಗೆ ಹೋರಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಶ್ರೀಲಂಕಾ ತಂಡ 19.4 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 133ರನ್ ಸಿಡಿಸುವ ಮೂಲಕ ಗೆಲುವಿನ ನಗೆ ಬೀರಿತು.
ಭಾರತ ಪರ ಕುಲ್‍ದೀಪ್ ಯಾದವ್ 2 ವಿಕೆಟ್ ಪಡೆದರೆ. ಚೇತನ್ ಸಕಾರಿಯಾ, ವರುಣ್ ಚಕ್ರವರ್ತಿ, ರಾಹುಲ್ ಚಹರ್ ತಲಾ 1 ವಿಕೆಟ್ ಕಿತ್ತರು.