ಕರಾವಳಿ
ಸ್ಕೂಟರ್ ಕಳವು ಪ್ರಕರಣ : ಮಣಿಪಾಲ ಪೊಲೀಸರಿಂದ ಆರೋಪಿಯ ಬಂಧನ.

ಮಣಿಪಾಲ : ಉಡುಪಿ ಜಿಲ್ಲೆಯ ಮಣಿಪಾಲ ಸಮೀಪ ಸ್ಕೂಟರ್ ಕಳವು ಪ್ರಕರಣ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಬಂಧಿಸಿದ ಆರೋಪಿ ಗುರುರಾಜ್ ನಾಯ್ಕ್ ಎಂದು ತಿಳಿದು ಬಂದಿದೆ.
ಆರೋಪಿಯು ಮಣಿಪಾಲದ ನೂಮಾ ಅಪಾರ್ಟ್‌ಮೆಂಟ್ ಬಳಿ ಇಟ್ಟಿದ್ದ ಸ್ಕೂಟರ್ ಕಳವು ನಡೆಸಿದ್ದ ಎನ್ನಲಾಗಿದೆ. ಮಣಿಪಾಲ ಪೊಲೀಸರು ಆರೋಪಿಯನ್ನು ಬಂಧಿಸಿ ಸ್ಕೂಟರ್ ವಶಪಡಿಸಿಕೊಂಡಿದ್ದಾರೆ.
ಬಂಧಿತ ಅರೋಪಿ ಗುರುರಾಜ್ ಮೇಲೆ ಕೆಲವು ಪೊಲೀಸ್ ಠಾಣೆಗಳಲ್ಲಿ ಕಳ್ಳತನದ ಪ್ರಕರಣಗಳು ದಾಖಲಾಗಿದೆ ಎಂದು ತಿಳಿಯಲಾಗಿದೆ.
ಆರೋಪಿಯ ಪತ್ತೆಗೆ ಉಡುಪಿ ಜಿಲ್ಲಾ ಎಸ್.ಪಿ ವಿಷ್ಣುವರ್ಧನ್ ಅವರ ಮಾರ್ಗದರ್ಶನದಂತೆ ಮಣಿಪಾಲ ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ್ ಎಂ ಗೌಡ, ಸಬ್ ಇನ್ಸ್ಪೆಕ್ಟರ್ ರಾಜಶೇಖರ್ ವಂದಾಲಿ,ಎಸ್.ಐ ಜನಾರ್ದನ್ ತೋನ್ಸೆ,ಪಿ.ಎಸ್ ಐ ಪರಶುರಾಮ್ ಹಾಗೂ ಠಾಣೆಯ ಪೊಲೀಸ್ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.