ರಾಷ್ಟ್ರೀಯ
ಇಂದಿನ ಕೊರೊನಾ ಪ್ರಕರಣ ವಿವರ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕೊರೋನಾ
ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಹೊಸದಾಗಿ 7,240 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಇದೇ ಅವಧಿಯಲ್ಲಿ ಕೊರೋನಾ ಸೋಂಕಿನಿಂದ 8 ಮಂದಿ
ಸಾವನ್ನಪ್ಪಿದ್ದು, ಈ ಮೂಲಕ ಈವರೆಗೆ ಕೊರೋನಾದಿಂದ
ಮೃತಪಟ್ಟವರ ಸಂಖ್ಯೆ 524723 ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ 7,240 ಹೊಸ ಕೋವಿಡ್-19 ಪ್ರಕರಣಗಳು
ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 32,498ಕ್ಕೆ
ಏರಿಕೆಯಾಗಿದೆ. ಬುಧವಾರಕ್ಕೆ ಹೋಲಿಸಿದರೆ (5,233) ಗುರುವಾರ ಪ್ರಕರಣಗಳ ಸಂಖ್ಯೆಯಲ್ಲಿ ಬಹುತೇಕ 2 ಸಾವಿರದಷ್ಟು ಏರಿಕೆಯಾಗಿದೆ. ಈ ಒಂದು ದಿನದ ಅವಧಿಯಲ್ಲಿ 3,591 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.