
ಉಡುಪಿ : ನಿನ್ನೆ ರಾತ್ರಿ ಉಡುಪಿಯ ಲಕ್ಷೀ ನಗರ ಬಳಿ ಯುವಕನೊಬ್ಬನ ಕೊಲೆಯಾಗಿದ್ದು, ಲಕ್ಷ್ಮೀ ನಗರ ಶಾಲೆಯ ಹಿಂಭಾಗದಲ್ಲಿ ಹತ್ಯೆಯಾದ ಯುವಕನ ಶವ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಕೊಲೆಯಾದ ಯುವಕ ಮಲ್ಪೆಯಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಯೋಗಿಶ್ ಎನ್ನಲಾಗಿದೆ. ಹಣಕಾಸಿನ ವಿಚಾರಕ್ಕೆ ಕೊಲೆ ನಡೆದಿದೆ ಎನ್ನಲಾಗಿದೆ.
ರೌಡಿ ಶೀಟರ್ ವಕ್ವಾಡಿ ಪ್ರವೀಣ್ ಹಾಗೂ ಗುರು ಭಟ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸುಜೀತ್ ಪಿಂಟೋ ಈ ಯುವಕನ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಕೊಲೆಯಾದ ಯುವಕ ಹಾಗೂ ಸುಜಿತ್ ಪಿಂಟೋ ಗುಂಪು ಗಲಾಟೆ ನಡೆಸಿದ್ದರು ಎನ್ನುವ ಮಾಹಿತಿ ತಿಳಿದು ಬಂದಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.